
ಮಂಜೇಶ್ವರ:- ಕಾಸರಗೋಡು ಜಿಲ್ಲಾ ಕುಲಾಲ ಸಂಘ (ರಿ.) ಮಂಜೇಶ್ವರ, ತೂಮಿನಾಡು ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ ಕುಲಾಲ ಸುಮುದಾಯ ಭವನದ ನೆಲ ಅಂತಸ್ತಿನಲ್ಲಿ ನರ‍್ಮಾಣಗೊಂಡಿರುವ ಮಿನಿ ಸಭಾಂಗಣದ ಉದ್ಘಾಟನೆಯು ಜರಗಿತು. ಸಮುದಾಯದ ವಿದ್ಯರ‍್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಉಚಿತ ಪುಸ್ತಕ ವಿತರಣೆ, ೨೦೨೪-೨೫ ರ ಸಾಲಿನ ಎಸ್. ಎಸ್. ಎಲ್. ಸಿ ಹಾಗೂ ಪ್ಲಸ್ ಟು /ಪಿ. ಯು. ಸಿ ಯ ರ‍್ನಾಟಕ ಕೇರಳ ಪರೀಕ್ಷೆ ಯಲ್ಲಿ ಅತ್ಯಧಿಕ ಅಂಕಗಳಿಸಿರುವ ವಿದ್ಯರ‍್ಥಿಗಳಿಗೆ ಪ್ರತಿಭಾ ಪುರಸ್ಕಾರ,ಸಾಧಕರಿಗೆ ಗೌರವರ‍್ಪಣೆ ಕರ‍್ಯಕ್ರಮ, ಸಹಾಯಹಸ್ತ ವಿತರಣೆ ಕರ‍್ಯಕ್ರಮ ಮತ್ತು ಸಂಘದ ವರ‍್ಷಿಕ ಮಹಾಸಭೆಯು ಜರಗಿತು. ಬೆಳಗ್ಗೆ ಗಣಹೋಮ, ಬಳಿಕ ಶ್ರೀ ಬಾಲಾoಜನೇಯ ವ್ಯಾಯಾಮ ಶಾಲೆ ಭಜನಾ ತಂಡ ಮತ್ತು ಶ್ರೀ ಮಹಾಕಾಳಿ ಭಜನಾ ಮಂಡಳಿ ತೂಮಿನಾಡು ಇವರಿಂದ ಭಜನೆ ಹಾಗೂ ನಂದಗೋಕುಲ ಭಜನಾ ತಂಡ ತೂಮಿನಾಡು ತಂಡದಿಂದ ಕುಣಿತ ಭಜನೆ ನಡೆಯಿತು. ಪರಮ ಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀ ಧಾಮ ಮಾಣಿಲ ಆಶರ‍್ವಚನ ನೀಡಿದರು.

ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಶ್ರೀ ರವೀಂದ್ರ ಮುನ್ನಿಪ್ಪಾಡಿ ಅಧ್ಯಕ್ಷತೆಯನ್ನು ವಹಿಸಿ ಪ್ರಸ್ತಾವನೆಯೊಂದಿಗೆ ಗಣ್ಯರನ್ನು ಸ್ವಾಗತಿಸಿದರು. ಶ್ರೀ ಪ್ರೇಮಾನಂದ ಕುಲಾಲ್ ಕೋಡಿಕಲ್ ಅಧ್ಯಕ್ಷರು, ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ (ರಿ.) ಕುಲಶೇಖರ, ಮಂಗಳೂರು ಸಭಾಂಗಣವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ದಿವಾಕರ ಮೂಲ್ಯ ಮಾಲಕರು ಅಮೂಲ್ಯ ರಬ್ಬರ್ ಇಂಡಸ್ಟ್ರಿಸ್ ಮತ್ತು ಅಧ್ಯಕ್ಷರು ಕುಲಾಲ ಸಂಘ (ರಿ.) ಬೆಂಗಳೂರು, ಶ್ರೀ ಗಣೇಶ್ ಕುಲಾಲ್ ಮಾಲಕರು ಶ್ರೀ ಲಕ್ಶ್ಮೀ ರ‍್ನಿರ‍್ಸ್ & ಇಂಟೀರಿರ‍್ಸ್ ಮಂಗಳೂರು, ಶ್ರೀ ಅನಿಲ್ ದಾಸ್ ಆಡಳಿತ ನರ‍್ದೇಶಕರು ದಾಸ್ ಪ್ರಮೋಷನ್ಸ್ & ರ‍್ಸಿಂಗ್ ಹೋಮ್ ಮಂಗಳೂರು, ಶ್ರೀಮತಿ ಕಮಲಾಕ್ಷೀ ವಿ ಕುಲಾಲ್ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯರು, ಶ್ರೀಮತಿ ಜಯಂತಿ ಬದಿಯಡ್ಕ ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯರು, ಶ್ರೀಮತಿ ಮಾಲತಿ ಪಿ ಮುಖ್ಯೋಪಾಧ್ಯಾಯಿನಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರು, ಶ್ರೀ ಜಯಪ್ರಕಾಶ್ ಕೈರಂಗಳ ಮ್ಯಾನೇಜರ್ ಓಪರೇಷನ್ ವಿಭಾಗ ಎಂ. ಆರ್. ಪಿ. ಎಲ್, ಶ್ರೀ ಸುಂದರ ಕುಲಾಲ್ ಶಕ್ತಿ ನಗರ ಆಡಳಿತ ಮೊಕ್ತೇಸರರು ಶ್ರೀ ವೀರ ನಾರಾಯಣ ದೇವಸ್ಥಾನ ಕುಲಶೇಖರ, ಶ್ರೀ ದಾಮೋದರ ಅಶೋಕನಗರ ಜರ‍್ಣೋದ್ದಾರ ಸಮಿತಿ ಅಧ್ಯಕ್ಷರು ಶ್ರೀ ವೀರ ನಾರಾಯಣ ದೇವಸ್ಥಾನ ಕುಲಶೇಖರ, ಶ್ರೀ ಸುರೇಶ್ ಕುಲಾಲ್ ಸಂಚಾಲಕರು ಜರ‍್ಣೋದ್ದಾರ ಸಮಿತಿ ಶ್ರೀ ವೀರನಾರಾಯಣ ದೇವಸ್ಥಾನ ಭಾಗವಹಿಸಿದರು. ಈ ಸಂರ‍್ಭದಲ್ಲಿ
ಸಾಧಕರಿಗೆ ಗೌರವರ‍್ಪಣೆ ನಡೆಯಿತು. ಸಾಧಕರಾದ ಕರಾಟೆ ಪಟು ಕು.ಸ್ವಾತಿ ಕೊಡಂಗೆ,ಯಕ್ಷಗಾನ ಕಲಾವಿದ ಶ್ರೀ ಜಯೇಂದ್ರ ಕುಲಾಲ್ ಕಿದೂರು, ಸಮಾಜ ಸೇವೆಗಾಗಿ ಶ್ರೀ ರಾಮ ಪ್ರಸಾದ್ ಯಸ್ ಮಂಗಳೂರು, ದೇಶ ಸೇವೆಗೆ ಶ್ರೀ ಪೂವಪ್ಪ ಕಡoಬಾರ್, ದೈವಾರಾದನೆ ಶ್ರೀ ಗೋಪಾಲ ಕೃಷ್ಣ ವಾಂತಿಚ್ಚಾಲ್, ಪ್ರಗತಿಪರ ಕೃಷಿಕ ಶ್ರೀ ಶೇಷ ಮೋಹನ್ ನೇರಪ್ಪಾಡಿ, SPಅ – ವಿದ್ಯರ‍್ಥಿ ಪೊಲೀಸ್ ಕೆಡೆಟ್ ನಲ್ಲಿ ಕೇರಳ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಕು. ರಶ್ಮಿತ. ಕೆ ತೂಮಿನಾಡು, ಕೇರಳ ರಾಜ್ಯ ಮಟ್ಟದ ಜೂನಿಯರ್ ರ‍್ಲ್ಸ್ ಕಬ್ಬಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಕು. ಸೃಷ್ಟಿ ಕುಂಜತ್ತೂರು ಇವರನ್ನು ಗೌರವಿಸಲಾಯಿತು.
ಆಶಕ್ತಕುಟುಂಬಕ್ಕೆ ನೀಡುವ ಕುಲಾಲ ಆಸರೆಯ ೭ ನೇ ಸಹಾಯ ಹಸ್ತ ಯೋಜನೆ ರೂಪಾಯಿ ೧೫,೦೦೦/- ಮೊತ್ತವನ್ನು ಕಿಡ್ನಿ ವೈಫಲ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಶ್ರೀ ಸುಂದರ ಮೂಲ್ಯ ಪರ‍್ಲ ರವರಿಗೆ ಮತ್ತು ಕುಲಾಲ ಆಸರೆಯ ೮ ನೇ ಸಹಾಯ ಹಸ್ತ ಯೋಜನೆ ರೂಪಾಯಿ ೧೫,೦೦೦/- ಮೊತ್ತ ವನ್ನು ಕಿಡ್ನಿ ವೈಫಲ್ಯ ದಿಂದ ಚಿಕಿತ್ಸೆ ಪಡೆಯುತ್ತಿರುವ ದೇವದಾಸ್ ಮಂಜೇಶ್ವರ ಅಡ್ಕರವರಿಗೆ ಗಣ್ಯರ ಉಪಸ್ಥಿಯಲ್ಲಿ ಸ್ವಾಮೀಜಿಯವರು ಹಸ್ತಾಂತರಿಸಿದರು. ಸುಮಾರು ೩೭೫ ಮಂದಿ ವಿದ್ಯರ‍್ಥಿಗಳಿಗೆ ಉಚಿತಪುಸ್ತಕ ವಿತರಿಸಲಾಯಿತು. ೨೦೨೪-೨೫ ನೇ ಸಾಲಿನ ಪರೀಕ್ಷೆ ಗಳಲ್ಲಿ ಅತ್ಯಧಿಕ ಅಂಕಗಳಿಸಿರುವ ಕೇರಳ/ರ‍್ನಾಟಕ ದ ಎಸ್. ಎಸ್. ಎಲ್. ಸಿ ಯ ೧೬ ಮಂದಿ ವಿದ್ಯರ‍್ಥಿಗಳಿಗೆ ಹಾಗೂ ಪ್ಲಸ್ ಟು /ಪಿ. ಯು. ಸಿ ಯ ೫ ಮಂದಿ ವಿದ್ಯರ‍್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಶ್ರೀ ದಾಮೋದರ ಮಾಸ್ಟರ್ ಕಬ್ಬಿನಹಿತ್ಲು ಪ್ರಧಾನ ಕರ‍್ಯರ‍್ಶಿ ಜಿಲ್ಲಾ ಕುಲಾಲ ಸಂಘ ಧನ್ಯವಾದ ಸರ‍್ಪಿಸಿ, ಯನ್.ಕೆ. ಕುಲಾಲ್ ಕರ‍್ಯಕ್ರಮ ನಿರೂಪಿಸಿದರು. ಮಹಾಸಭೆಯಲ್ಲಿ ೨೦೨೫-೨೭ ನೇ ಸಾಲಿನ ನೂತನ ಕರ‍್ಯ ಕಾರಿ ಸಮಿತಿಯ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ನ್ಯಾಯವಾದಿ ಶ್ರೀ ರವೀಂದ್ರ ಮುನ್ನಿಪ್ಪಾಡಿ, ಉಪಾಧ್ಯಕ್ಷರಾಗಿ ಶ್ರೀ ರಾಮ ಉಜಿರೆ, ಪ್ರಧಾನ ಕರ‍್ಯರ‍್ಶಿಯಾಗಿ ಶ್ರೀ ದಾಮೋದರ ಮಾಸ್ಟರ್ ಕಬ್ಬಿನಹಿತ್ಲು, ಜತೆ ಕರ‍್ಯರ‍್ಶಿ ಯಾಗಿ ಶ್ರೀ ಭೋಜ ಮಸ್ಟರ್ ಪಾವೂರು, ಕೋಶಾಧಿಕಾರಿಯಾಗಿ ಶ್ರೀ ಈಶ್ವರ್ ಕುಲಾಲ್ ಕಣ್ವತರ‍್ಥ, ಕ್ರೀಡಾಕರ‍್ಯರ‍್ಶಿಯಾಗಿ ಶ್ರೀ ತಾರನಾಥ ಕಣ್ವತರ‍್ಥ, ಸಂಘಟನಾ ಸಂಚಾಲಕರಾಗಿ ಶ್ರೀ ಸುಧೀರ್ ರಂಜನ್ ದೈಗೋಳಿ ಹಾಗೂ ಶ್ರೀ ಜಯಂತ ಚಿಪ್ಪಾರ್, ಸೇವಾದಳಪತಿಗಳಾಗಿ ಶ್ರೀ ಪ್ರಸಾದ್ ತುಮಿನಾಡು ಹಾಗೂ ಸುರೇಶ್ ಕಣ್ವತರ‍್ಥ, ನ್ಯಾಯ ಸಲಹಾ ಮಂಡಳಿ ಸದಸ್ಯರಾಗಿ ಶ್ರೀ ಸೋಮಪ್ಪ ಸಾಲ್ಯಾನ್ ಕುಂಜತ್ತೂರು, ಶ್ರೀ ಬಾಲಕೃಷ್ಣ ಮುನ್ನಿಪ್ಪಾಡಿ, ಶ್ರೀ ವಿಶ್ವನಾಥ ಮಾಣಿಪ್ಪಾಡಿ ಹಾಗೂ ಇತರ ೨೧ ಮಂದಿ ಸದಸ್ಯರು ಕರ‍್ಯಕಾರಿ ಸಮಿತಿಗೆ ಆಯ್ಕೆಯಾದರು.
