ಸಂಚರಿಸುತ್ತಿದ್ದ ರೈಲಿನಿಂದ ಬೇರ್ಪಟ್ಟು ಹಳಿಯಲ್ಲಿ ನಿಂತ ಬೋಗಿಗಳು!

ವರದಿ: ಅದ್ದಿ ಬೊಳ್ಳೂರು
ಮುಲ್ಕಿ : ಹಳೆಯಂಗಡಿ ಇಂದಿರಾನಗರದ ರೈಲ್ವೇ ಗೇಟ್ಬ ಬಳಿಯಲ್ಲಿ ಗೂಡ್ಸ್ ರೈಲೊಂದು ಸಂಚರಿಸುತ್ತಿದ್ದಂತೆಯೇ ರೈಲಿನ ಮಧ್ಯಭಾಗದಿಂದ ಬೇರ್ಪಟ್ಟ ಬೋಗಿಗಳು ಹಳಿಯಲ್ಲಿಯೇ ಬಾಕಿಯಾಗಿ, ಸುಮಾರು ಒಂದು ತಾಸು ರೈಲ್ವೇ ಗೇಟ್‌ನಲ್ಲಿ ವಾಹನ ಸವಾರರು ಪರದಾಡುವಂತಾಯಿತು ಪಡುಬಿದ್ರಿಯಿಂದ ಮಂಗಳೂರಿನ ಎನ್‌ಎಂಪಿಟಿ ಯತ್ತ ತೆರಳುತ್ತಿದ್ದ ಗೂಡ್ಸ್ ಹೊತ್ತಿದ್ದ ರೈಲು ತಾಂತ್ರಿಕ ದೋಷದಿಂದ ಭೋಗಿಗಳು ಮಧ್ಯಭಾಗದಿಂದ ಸಂಪರ್ಕ ಕಡಿದುಕೊಂಡು ಬೇರ್ಪಟ್ಟು ರೈಲ್ವೇ ಗೇಟ್‌ನ ಬಳಿಯಲ್ಲಿ ನಿಂತಿತು. ಇದರಿಂದ ಗೇಟ್ ಸಹ ತೆರವುಗೊಳ್ಳದೇ ಇದ್ದುದರಿಂದ ನೂರಾರು ವಾಹನಗಳು ಎರಡೂ ಬದಿಯಲ್ಲಿ ಸುಮಾರು ಒಂದು ತಾಸು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಯಿತು.ಬೇರ್ಪಟ್ಟ ಸ್ಥಿತಿಯಲ್ಲಿ ಸುಮಾರು ಒಂದು ಕಿಲೋಮೀಟರ್ ಇಂಜಿನ್ ಮುಂದೆ ಚಲಿಸಿದ್ದು ನಂತರ ಸುರತ್ಕಲ್‌ನಿಂದ ತಾಂತ್ರಿಕ ತಜ್ಞರು ಬಂದು ದುರಸ್ಥಿಗೊಳಿಸಿದ ಬಳಿಕ ಗೂಡ್ಸ್ ರೈಲು ಸಂಚಾರ ಮುಂದುವರಿಸಿತು.

