ನಿಧಿಲ್ಯಾಂಡ್ ಸಂಸ್ಥೆಯ ನೂತನ ಕಛೇರಿ ಉದ್ಘಾಟನೆಗೆ ಆಹ್ವಾನ

ಮಂಗಳೂರು: ನಗರದ ಪ್ರಖ್ಯಾತ ಕಟ್ಟಡ ನಿರ್ಮಾಣ ಸಂಸ್ಥೆ ನಿಧಿಲ್ಯಾಂಡ್ ಇದರ ನೂತನ ಕಚೇರಿ ಮಂಗಳೂರಿನ ಬಿಜೈ, ಕುಂಟಿಕಾನ ಬಳಿ ಇರುವ,ನ್ಯೂ ಬೆರ್ರಿ ಎನ್ಕ್ಲೇವ್‍ನಲ್ಲಿ ಉದ್ಘಾಟನೆ ಗೊಳ್ಳಲಿದೆ.
ನೂತನ ಕಚೇರಿಯನ್ನು, ದಿನಾಂಕ 23.01.2023 ಸೋಮವಾರ ಬೆಳಿಗ್ಗೆ 10.00 ಗಂಟೆಗೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಇಂಧನ ಇಲಾಖೆ ಸಚಿವರು,ಮತ್ತು ದ. ಕ. ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಉದ್ಘಾಟಿಸಲಿದ್ದು, ದೀಪ ಪ್ರಜ್ವಲನವನ್ನು, ಸಂಸದರು, ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್‍ರವರು ಮಾಡಲಿದ್ದಾರೆ.
ಮಂಗಳೂರು ಬ್ರಹ್ಮಕುಮಾರಿ ಸಂಸ್ಥೆಯ ಮುಖ್ಯಸ್ಥರಾದ ರಾಜಯೋಗಿನಿ ಬಿ.ಕೆ. ವಿಶ್ವೇಶ್ವರಿ ಜಿ ಯವರು ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ
ಸಭಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಂಗಳೂರು ಶಾಸಕ ಡಿ. ವೇದವ್ಯಾಸ ಕಾಮತ್, ಗೌರವ ಅತಿಥಿಗಳಾಗಿ ಶಾಸಕರುಗಳಾದ ಭರತ್ ಶೆಟ್ಟಿ,ವೈ,ಮಂಗಳೂರು ಉತ್ತರ, ಉಮಾನಾಥ ಕೋಟ್ಯಾನ್, ಮೂಡಬಿದ್ರೆ, ಜಯಾನಂದ ಅಂಚನ್, ಮಹಾ ಪೌರರು, ಮಂಗಳೂರು ನಗರ ಪಾಲಿಕೆ, ರವಿಶಂಕರ್ ಮಿಜಾರ್, ಅದ್ಯಕ್ಷರು, ಮೂಡ, ಬಿ.ರಮಾನಾಥರೈ,ಮಾಜಿ ಸಚಿವರು, ಜೆ. ಆರ್. ಲೋಬೋ, ಮಾಜಿ ಶಾಸಕರು, ಮತ್ತು ಕಾರ್ಪೊರೇಟರ್ ಲಾನ್ಸಿ ಲಾಟ್‍ಪಿಂಟೊ, ಭಾಗವಹಿಸಲಿದ್ದಾರೆ.
ಉದ್ಗಾಟನಾ ಸಮಾರಂಭಕ್ಕೆ ತಾವೆಲ್ಲರೂ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ನಿಧಿ ಲ್ಯಾಂಡ್ ಸಂಸ್ಥೆಯ ಪರವಾಗಿ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್. ಕೆ. ಸನಿಲ್ ಮತ್ತು ಟೀಮ್ ನಿಧಿಲ್ಯಾಂಡ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.