ಎಡಪದವು:ಸ್ತ್ರೀ ಶಕ್ತಿ ಭವನದ ಎದುರು ವ್ಯಕ್ತಿಯ ಶವ ಪತ್ತೆ

ಕುಪ್ಪೆಪದವು: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಪದವು ಗ್ರಾಮ ಪಂಚಾಯತ್ ನ ಸ್ತ್ರೀ ಶಕ್ತಿ ಭವನದ ಜಗಳಿಯಲ್ಲಿ ವ್ಯಕ್ತಿಯೊಬ್ಬರ ಶವ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ.ಪತ್ತೆಯಾಗಿರುವ ಶವ ಗಂಜಿಮಠ ಗಾಂಧಿನಗರ ನಿವಾಸಿ ಸುರೇಶ್ ಗೌಡ(35) ಎಂಬವರದು ಎಂದು ಗುರುತಿಸಲಾಗಿದ್ದು, ತಲೆಯಿಂದ ವಿಪರೀತ ರಕ್ತ ಸ್ರಾವಾಗಿದ್ದು ಇದು ಆಕಸ್ಮಿಕ ಸಾವೇ ಅಥವಾ ಕೊಲೆಯೇ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ.ಸುರೇಶ್ ಗೌಡ ಕಳೆದ ಎರಡು ತಿಂಗಳ ಹಿಂದೆಯೇ ಮನೆ ಬಿಟ್ಟಿದ್ದು ವಿಪರೀತ ಕುಡಿದ ಮತ್ತಿನಲ್ಲಿ ಕುಸಿದು ಬಿದ್ದ ವೇಳೆ ತಲೆಗೆ ಪೆಟ್ಟಾಗಿ ರಕ್ತ ಸ್ರಾವವಾಗಿ ಸಾವಿಗೀಡಾಗಿರುವ ಸಾಧ್ಯತೆಯೂ ಇದೆ. ಸುರೇಶ್ ಯಾವ ದಿನ ಸಾವಿಗೀಡಾಗಿದ್ದಾರೆ ಎಂದು ಖಚಿತವಾಗಿಲ್ಲ.
ಸ್ತ್ರೀ ಶಕ್ತಿ ಭವನ ಪಂಚಾಯತ್ ಆವರಣದಲ್ಲಿ ಇದ್ದು ಆದಿತ್ಯವಾರ ಪಂಚಾಯತ್ ಗೆ ರಜೆ ಇದ್ದುದರಿಂದ ಪಂಚಾಯತ್ ಕಛೇರಿಗೆ ಯಾರೂ ಬಂದಿರಲಿಲ್ಲ ಸೋಮವಾರ ಬೆಳಿಗ್ಗೆಯಷ್ಟೇ ಶವವನ್ನು ಗಮನಿಸಲಾಗಿದೆ. ಬಜಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವದ ಮಹಜರು ನಡೆಸಿ, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.