ಬಿಎಸ್ ಪಿ ಜಿಲ್ಲಾಧ್ಯಕ್ಷ ದಾಸಪ್ಪ ಎಡಪದವು ನಿಧನ

ಕುಪ್ಪೆಪದವು: ಬಹುಜನ ಸಮಾಜ ಪಕ್ಷದ ದ.ಕ. ಜಿಲ್ಲಾಧ್ಯಕ್ಷ  ದಾಸಪ್ಪ ಎಡಪದವು(63) ಹೃದಯಾಘಾತಕ್ಕೆ ಒಳಗಾಗಿ ಶನಿವಾರ ಮುಂಜಾನೆ 4 ಗಂಟೆಗೆ ನಿಧನರಾಗಿದ್ದಾರೆ.

ಶನಿವಾರ ಮುಂಜಾನೆ ಹೃದಯಾಘಾತಕ್ಕೆ ಒಳಗಾದ ದಾಸಪ್ಪ ಅವರನ್ನು ಆಸ್ಪತ್ರೆ ಸಾಗಿಸುತ್ತಿದ್ದಾಗ ದಾರಿ ಮಧ್ಯೆ ಮೃತ ಪಟ್ಟರು ಎಂದು ಕುಟುಂಬದ ಮೂಲಗಳು ತಿಳಿಸಿವೆ.  ಜುಲೈ 1.1959ರಂದು ಜನಿಸಿದ ದಾಸಪ್ಪ ಅವರು ಅಂಬೇಡ್ಕರ್ ಅವರ ಸಿದ್ದಾoತಗಳನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಂಡು ದಲಿತ, ಶೋಷಿತರ ಪರ ಹೋರಾಟದ ಮುಂಚೂಣಿಯಲ್ಲಿದ್ದರು ಜಿಲ್ಲಾ ಬಹುಜನ ಸಮಾಜ ಪಕ್ಷದ ಅಧ್ಯಕ್ಷರಾಗಿ, ಗುರುಪುರ ಫಿರ್ಕಾ ದಲಿತ್ ಅಭಿವೃದ್ಧಿ ಸಮಿತಿಯ ಸ್ಥಾಪಕರಾಗಿದ್ದರು. 

Leave a Reply

Your email address will not be published. Required fields are marked *