ಹೆತ್ತವ್ವನಿಗೆ ಬೇಡವಾದ ಹಸುಗೂಸಿನ ಮೃತ ದೇಹ ಪತ್ತೆ!

ಸೋಮವಾರಪೇಟೆ:-ಹೆಣ್ಣಿಗೆ ತಾಯ್ತನ ದೈವ ಕೊಟ್ಟ ಮಹಾನ್ ವರ,ಒಂಬತ್ತು ತಿಂಗಳು ಹೊತ್ತು,ಹೆತ್ತು ಸಂತೃಪ್ತಿ ಪಡೆಯುವ ಹೆಣ್ಣುಜೀವ ಆದರೆ ಎಲ್ಲೋ ಒಮ್ಮೊಮ್ಮೆ ತನ್ನಿಚ್ಛೆಯೋ,ಬಲಾತ್ಕಾರವೂ ಗರ್ಭದರಿಸುವ ಹೆಣ್ಣು ಜನ್ಮನೀಡಿದ ನಂತರ ತನ್ನ ಕರುಳ ಕುಡಿಯನ್ನೇ ಎಸೆಯುವ, ಕೊಲ್ಲುವ ಮೂಲಕ ತನ್ನ ಕಠೋರ ಹೃದಯ ತೋರಿಸಿಬಿಡುತ್ತಾರೆ ಅಂಥ ಘಟನೆ ಸೋಮವಾರಪೇಟೆ ಹಾನಗಲ್ಲು ಗ್ರಾಮದಲ್ಲಿ ನಡೆದಿದೆ.ಯಾರ ಹೊಟ್ಟೆಯಲ್ಲಿ ಹುಟ್ಟಿದ ಮಗುವೋ ಏನೂ ಜನಿಸಿದ 2 ದಿನದ ಗಂಡು ಮಗುವಿನ ಮೃತದೇಹ ಕಾಫಿ ತೋಟದೊಳಗೆ ಪತ್ತೆಯಾಗಿದೆ. ಹುಟ್ಟಿದಾಗ ಸರಿಯಾಗಿ ಹೊಕ್ಕಳು ಬಳ್ಳಿಯನ್ನು ಸರಿಯಾಗಿ ಕತ್ತರಿಸದೆ ಹೆತ್ತಾಕೆ ತೋಟದೊಳಗೆ ಎಸೆದಿದ್ದಾಳೆ.ಸ್ಥಳಕ್ಕೆ ಪೊಲೀಸರು,ಆಸ್ಪತ್ರೆ ಸಿಬ್ಬಂದಿಗಳು ತೆರಳಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಶಕ್ಕೆ ಪಡೆದಿದ್ದಾರೆ.