ಯಕ್ಷಗಾನ ಕಲಾವಿದ ಅತ್ಮಹತ್ಯೆ

ಕಟೀಲು:ಯಕ್ಷಗಾನ ಕಲಾವಿದರೊಬ್ಬರು ನೇಣುಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡ ಘಟನೆ ಕಟೀಲು ಸಮೀಪ ಉಲ್ಲಂಜೆ ಎಂಬಲ್ಲಿ ಇಂದು ನಡೆದಿದೆ.ಅತ್ಮಹತ್ಯೆ ಮಾಡಿಕೊಂಡ ಯಕ್ಷಗಾನ ಕಲಾವಿದರನ್ನು ಕೊಡೆತ್ತೂರು ನಿವಾಸಿ ಶಂಭುಕುಮಾರ್ (48)ಎಂದು ಗುರುತಿಸಲಾಗಿದೆ.ಪುತ್ತೂರು,ಬಪ್ಪನಾಡು ಹಾಗೂ ಕಟೀಲು ಮೇಳಗಳಲ್ಲಿ ಕಳೆದ ಹಲವು ವರ್ಷಗಳಿಂದ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದರು.ಅಲ್ಲದೆ ಹಳೆಯಂಗಡಿ ಸಮೀಪದ ಹೊಯಿಗೆ ಗುಡ್ಡೆ ಉಮಾಮಹೇಶ್ವರ ದೇವಸ್ಥಾನದ ಹೆಸರಿನಲ್ಲಿ ಚಿಕ್ಕ ಮೇಳವೊಂದನ್ನು ನಡೆಸುತ್ತಿದ್ದರು.ಅರ್ಥಿಕ ಸಮಸ್ಯೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.ಸ್ಥಳಕ್ಕೆ ಮೂಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *