ಗುರುಪುರ ಪಂಚಾಯತ್ ನಲ್ಲಿ ಸಾವರ್ಕರ್ ಫೊಟೋ ಹಿಡಿದು ನೃತ್ಯ :ಎಸ್ ಡಿ ಪಿ ಐ ವಿರೋಧ

ಕುಪ್ಪೆಪದವು:ಸ್ವಾತಂತ್ರ್ಯ ದ ಅಮೃತ ಮಹೋತ್ಸವ ಆಚರಣೆ ಯ ವೇಳೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿ ಗಳು ನಡೆಸಿದ ನ್ರತ್ಯ ಕಾರ್ಯಕ್ರಮದಲ್ಲಿ ವೀರ ಸಾವರ್ಕರ್ ಅವರ ಭಾವಚಿತ್ರ ಹಿಡಿದುದಕ್ಕೆ ಎಸ್ ಡಿ ಪಿ ಐ ವಿರೋಧ ವ್ಯಕ್ತಪಡಿಸಿ ಶಿಕ್ಷಕರಿಂದ ಕ್ಷಮೆ ಕೇಳಿಸಿದ ಘಟನೆ ಗುರುಪುರ ಗ್ರಾಮ ಪಂಚಾಯತ್ ನಲ್ಲಿ ಇಂದು ಸ್ವಾತಂತ್ರ್ಯ ದಿನಾಚರಣೆಯ ವೇಳೆ ನಡೆದಿದ್ದು ಇದಕ್ಕೆ ಬಿಜೆಪಿ ಮತ್ತು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ಎಸ್ ಡಿ ಪಿ ಐ ಮತ್ತು ಕಾಂಗ್ರೇಸ್ ಸಮ್ಮಿಶ್ರ ಆಡಳಿತ ಇರುವ ಗುರುಪುರ ಪಂಚಾಯತ್ ನಲ್ಲಿ ನ್ರತ್ಯದಲ್ಲಿ ವೀರ ಸಾವರ್ಕರ್ ಅವರ ಭಾವ ಚಿತ್ರ ಪ್ರದರ್ಶಿಸಿದ್ದನ್ನು ಎಸ್ ಡಿ ಪಿ ಐ ಬೆಂಬಲಿತ ಪಂಚಾಯತ್ ಸದಸ್ಯರು ಆಕ್ಷೇಪಿಸಿ ಶಿಕ್ಷಕರಿಂದ ಕ್ಷಮೆ ಕೇಳಿಸಿದ್ದನ್ನು ಬಿಜೆಪಿ ಬೆಂಬಲಿತ ಸದಸ್ಯರು ವಿರೋಧಿಸಿದ್ದರು. ಸ್ಥಳಕ್ಕೆ ಬಜಪೆ ಪೋಲೀಸರು ಭೇಟಿ ನೀಡಿದ್ದಾರೆ.