ಫಾಝಿಲ್ ಹತ್ಯೆ: ನಾಲ್ವರ ಸೆರೆ!? ಹತ್ಯೆಯ ಹಿಂದಿದೆಯಾ ಬಜರಂಗದಳ?

ಸುರತ್ಕಲ್: ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖಾ ತಂಡಗಳು ಒಟ್ಟು 14 ಮಂದಿಯನ್ನು ತಮ್ಮ ವಶದಲ್ಲಿರಿಸಿ ವಿಚಾರಣೆ ನಡೆಸಿದ್ದು ಅವರಲ್ಲಿ ನಾಲ್ವರು ಕೃತ್ಯದಲ್ಲಿ ನೇರವಾಗಿ ಶಾಮೀಲಾದವರು ಎಂಬ ಮಾಹಿತಿ ಪತ್ರಿಕೆಗೆ ಬಲ್ಲಮೂಲಗಳಿಂದ ಲಭಿಸಿದೆ. ಬಜರಂಗದಳ ಕಾರ್ಯಕರ್ತರು ಹತ್ಯೆಯಲ್ಲಿ ಪಾಲ್ಗೊಂಡಿರುವ ಬಗ್ಗೆ ಶಂಕಿಸಲಾಗಿದ್ದು ಸುರತ್ಕಲ್ ಪೊಲೀಸ್, ಸಿಸಿಬಿಯ ಎರಡು ವಿಶೇಷ ತಂಡಗಳು ಆರೋಪಿಗಳ ಬೆನ್ನು ಬಿದ್ದಿದ್ದು ತನಿಖೆಯಲ್ಲಿ ಮಹತ್ವದ ಗೆಲುವು ಸಾಧಿಸಿದೆ. ಸುರತ್ಕಲ್ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗುವಿನ ವಾತಾವರಣ ಮುಂದುವರಿದಿದ್ದು ಭಾರೀ ಪೊಲೀಸ್ ಭದ್ರತೆ ವಹಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಜಯಕಿರಣ ಪತ್ರಿಕೆ ಓದಿರಿ

Leave a Reply

Your email address will not be published. Required fields are marked *