ಪಾವಂಜೆ ನಂದಿನಿ ನದಿಗೆ ಹಾರಿದ ಯುವಕ, ನಾಪತ್ತೆ!

ಮೂಲ್ಕಿ: ಮಂಡ್ಯ ಮೂಲದ ಪ್ರಸ್ತುತ ಮಂಗಳೂರು ಪೋಸ್ಟ್ ಆಫೀಸ್ ಉದ್ಯೋಗಿ ರಾಕೇಶ್ ಗೌಡ (26) ಪಾವಂಜೆ ಸೇತುವೆಯಿಂದ ನದಿಗೆ ಹಾರಿ ನಾಪತ್ತೆಯಾದ ಘಟನೆ ಇಂದು ಮುಂಜಾನೆ ಬೆಳಕಿಗೆ ಬಂದಿದೆ.ನದಿಗೆ ಹಾರುವ ಮುನ್ನ ತನ್ನ ಮೊಬೈಲ್ ಹಾಗೂ ಇನ್ನಿತರ ವಸ್ತುಗಳನ್ನು ಬೈಕ್ನಲ್ಲಿ ಇಟ್ಟಿದ್ದರು ಎನ್ನಲಾಗಿದೆಅಲ್ಲದೆ ತಾನು ನದಿಗೆ ಹಾರುತ್ತಿರುವ ಕುರಿತು ಸಂಬಂಧಿಕರಿಗೆ ವಾಟ್ಸಾಪ್ನಲ್ಲಿ ಲೊಕೇಶನ್ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಮುಲ್ಕಿ ಮತ್ತು ಸುರತ್ಕಲ್ ವ್ಯಾಪ್ತಿಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.ರಾಕೇಶ್ ಗೌಡ ಅವರ ಮಾವ ಅಬಕಾರಿ ಇಲಾಖೆಯ ಡಿವೈಎಸ್ಪಿ ಎಂದು ತಿಳಿದುಬಂದಿದೆ.ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಘಟನಾ ಸ್ಥಳಕ್ಕೆ ಅವರ ಸೂಚನೆಯಂತೆ ಇಲಾಖೆಯ ಸಿಬ್ಬಂದಿ ಬಂದಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಜಯಕಿರಣ ಪತ್ರಿಕೆ ಓದಿರಿ