*ಯಕ್ಷರಂಗದ ಭರವಸೆಯ ಕಲಾವಿದ ಆದಿತ್ಯ ಪೂಜಾರಿ ಮಾಂಟ್ರಾಡಿ*

ಮೂಡುಬಿದ್ರೆ: ತೆಂಕು ತಿಟ್ಟಿನ ಯಕ್ಷಗಾನ ರಂಗದಲ್ಲಿ ಪ್ರತಿಭಾವಂತ ಕಲಾವಿದನೋರ್ವನ ಉದಯ ವಾಗುತ್ತಿದೆ. ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಬಾಲ ಕಲಾವಿದ ಆದಿತ್ಯ ಪೂಜಾರಿ ಮಾಂಟ್ರಾಡಿ ಇವರು ಆಗಸ್ಟ್ ೫, ೨೦೦೯ ರಂದು ಮೂಡುಮಾರ್ನಾಡು ನಾರಿಯ ನಾಗೇಶ್ ಮತ್ತು ಸುಜಾತಾ ಪೂಜಾರಿ ದಂಪತಿಗಳಿಗೆ ಪುತ್ರನಾಗಿ ಜನಿಸಿದರು. ಇವರು ಪ್ರಸ್ತುತ ಎಂಟನೇ ತರ ಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

೪ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಮಯದಲ್ಲಿ ಮಾಂಟ್ರಾಡಿ ಪಿದಮಲೆ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಆಶೀ ರ್ವಾದದಿಂದ ಮತ್ತು ಮಾಂಟ್ರಾಡಿ ಹೋಡಿಮುಂಡೇವು ದೈವದೇವರ ಹಾಗೂ ಹಿರಿಯರ ಆಶೀರ್ವಾದ ದಿಂದ ಹೋಡಿಮುಂಡೇವು ರವೀಂದ್ರ ಪೂಜಾರಿಯವರ ಸಲಹೆ ಸಹಕಾರ ದೊಂದಿಗೆ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಮೇಳದ ಪ್ರಸಿದ್ಧ ಕಲಾವಿದರಾದ ಉಮೇಶ್ ಕುಪ್ಪೆಪದವು ಮತ್ತು ಶ್ರೀ ಪ್ರದೀಪ್ ಕುಮಾರ್ ಮೂಡಬಿದ್ರಿ ಇವರಿಂದ ಪ್ರಥಮ ಯಕ್ಷಗಾನದ ಹೆಜ್ಜೆಯನ್ನು ಕಲಿತು ಮಾಂಟ್ರಾಡಿ ಪಿದಮಲೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಮುರಳೀಕೃಷ್ಣ ಮಿತ್ತಂತಾಯ ಆಸ್ರಣ್ಣರವರ ಮಾರ್ಗ ದರ್ಶನ ಮತ್ತು ನೇತೃತ್ವದಲ್ಲಿ ಮಾಂಟ್ರಾಡಿ ಹೊಂಪೆಟ್ಟು ಸರ್ಕಾರಿ ಶಾಲೆಯಲ್ಲಿ ನಡೆದ ‘ಶ್ರೀ ಸುದರ್ಶನ ವಿಜಯ’ ಎಂಬ ಯಕ್ಷಗಾನದಲ್ಲಿ ಪ್ರ ಪ್ರಥಮವಾಗಿ ಗೆಜ್ಜೆ ಕಟ್ಟಿ ದೇವೇಂದ್ರ ಬಲ ಅಗ್ನಿಯ ಪಾತ್ರವನ್ನು ಅಚ್ಚು ಕಟ್ಟಾಗಿ ಮಾಡಿ ಯಕ್ಷರಂಗಕ್ಕೆ ಪ್ರವೇಶಿಸಿದರು.

ಬಜ್ಪೆಯ ಪೆರ್ಮುದೆ ಯಾದವ ಕೋಟ್ಯಾನ್ ಇವರ ಮನೆಯಲ್ಲಿ ನಡೆದ ಕಟೀಲು ಶ್ರೀ ದುರ್ಗಾಪರಮೇ ಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮೇಳದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನದಲ್ಲಿ ಆರನೇ ಮೇಳದ ಪ್ರದೀಪ್ ಕುಮಾರ್ ಮೂಡಬಿದ್ರಿಯವರ ಸಹಕಾರದೊಂದಿಗೆ ಕಟೀಲು ಆರನೇ ಮೇಳದ ಪ್ರಸಿದ್ಧ ಭಾಗವತರಾದ ಗೋಪಾಲಕೃಷ್ಣ ಪುಂಡಿಕಾಯಿ ಮತ್ತು ಮ್ಯಾನೇಜರ್ ಸದಾಶಿವ ಮುಂಡಾಜೆ ಯವರ ಪ್ರೇರಣೆಯಂತೆ ಅರುಣ್ ಕಾಟಿಪಳ್ಳ ಇವರಿಂದ ಮುಖಕ್ಕೆ ಬಣ್ಣ ವನ್ನು ಹಾಕಿಸಿಕೊಂಡು ಉಮೇಶ್ ಕುಪ್ಪೆಪದವು ಇವರಿಂದ ಗೆಜ್ಜೆ ಕಟ್ಟಿಸಿ ಕೊಂಡು ದೇವೇಂದ್ರ ಬಲ ತುರಾಯಿ ವೇಷವನ್ನು ಮಾಡಿ ಕಟೀಲು ಆರನೇ ಮೇಳದಲ್ಲಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪ್ರಥಮ ಸೇವೆಯನ್ನು ಮಾಡಿದ್ದರು.

ಪ್ರದೀಪ್ ಕುಮಾರ್ ಮೂಡಬಿದ್ರೆ ಇವರಿಂದ ಸ್ವಂತ ಗೆಜ್ಜೆಯನ್ನು ಮಾಡಿಸಿ ಕೊಂಡು ಶ್ರೀ ಕಟೀಲು ದೇಗುಲದಲ್ಲಿ ಅದಕ್ಕೆ ಅರ್ಚಕರಿಂದ ಪೂಜೆಯನ್ನು ಮಾಡಿಸಿ ಅವರ ಕೈಯಿಂದಲೆ ಸ್ವೀಕರಿಸಿ ನಂತರ ಮಾಂಟ್ರಾಡಿ ಹೋಡಿ ಮುಂಡೇವು ರವೀಂದ್ರ ಪೂಜಾರಿ ಯವರು ಕಟೀಲು ಆರನೇ ಮೇಳದ ಕಲಾವಿದರಾದ ಅರುಣ್ ಕಾಟಿಪಳ್ಳ ಇವರ ಮಾರ್ಗದರ್ಶನದಿಂದ ದೇವಾ ಖಾನದಿಂದ ಪೂರ್ಣ ಪಗಡಿ ವೇಷದ ಬಟ್ಟೆ ಮಣಿಸಾಮಾನು, ಪಗಡಿಯನ್ನು ಮಾಡಿಸಿ ಪೆರಾಡಿ ಭಂಡಾಸಾಲೆಯಲ್ಲಿ ಕಟೀಲು ಆರನೇ ಮೇಳದ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಯಕ್ಷಗಾನದ ಸಂದರ್ಭ ದಲ್ಲಿ ಮೇಳದ ಅರ್ಚಕರಿಂದ ಪೂಜೆ ಮಾಡಿಸಿ ಆದಿತ್ಯನವರಿಗೆ ಒಪ್ಪಿಸಿ ದೇವೇಂದ್ರ ಬಲ ಪಗಡಿ ವೇಷವನ್ನು ಮಾಡಿದರು. ಇದೀಗ ಇವರು ನಾಟ್ಯ ಮಯೂರಿ ಶ್ರೀ ರಕ್ಷಿತ್ ಶೆಟ್ಟಿ ಪಡ್ರೆಯ ವರ ಮೂಡಬಿದ್ರೆಯ ಧಿಗಿಣ ಧಿವಿಜ ತರಗತಿಯಲ್ಲಿ ಸಂಪೂರ್ಣ ಯಕ್ಷ ಗಾನದ ಹೆಜ್ಜೆ ಮತ್ತು ನಾಟ್ಯವನ್ನು ಕಲಿ ಯತ್ತಿದ್ದು ಪಡ್ರೆಯವರ ಮಕ್ಕಳ ತಂಡ ದಲ್ಲಿ ಷಣ್ಮುಖ, ದೇವೇಂದ್ರ ಬಲ ಹಾಗೂ ಇನ್ನಿತರ ಅನೇಕ ವೇಷ ಮಾಡಿದ್ದಾರೆ. ಮಂದಾರ ಮೂಡಬಿದ್ರಿ ಇವರ ಸಹಾಯದಿಂದ ಸುಂಕದಕಟ್ಟೆ ಮೇಳದಲ್ಲಿ ವೇಷ ಮಾಡಿದ್ದಾರೆ. ಕಟೀಲು ಒಂದನೇ ಮೇಳದ ಪ್ರಸಿದ್ಧ ಭಾಗವತರಾದ ಅಂಡಲಾ ದೇವಿ ಪ್ರಸಾದ್ ಶೆಟ್ಟಿ, ಐದನೇ ಮೇಳದ ಭಾಗ ವತರಾದ ಗೋವಿಂದ ಭಟ್ ಮತ್ತು ಮ್ಯಾನೇಜರ್ ಕಟೀಲು ಮೇಳದ ಪ್ರಸಿದ್ಧ ಕಲಾವಿದ ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್ ಇವರ ಒಪ್ಪಿಗೆಯಿಂದ ಹಲವಾರು ಬಾರಿ ವೇಷ ಮಾಡಿರುತ್ತಾರೆ. ಕಟೀಲು ಒಂದನೇ ಮೇಳ, ಮೂರನೇ ಮೇಳ, ಐದನೇ ಮೇಳ ಹಾಗೂ ಆರನೇ ಮೇಳ ದಲ್ಲಿ ಸುಮಾರು ನೂರಕ್ಕೂ ಹೆಚ್ಚು ವೇಷವನ್ನು ಮಾಡಿ ಕಟೀಲು ಅಮ್ಮನ ವರ ಸೇವೆಯನ್ನು ಮಾಡಿದ್ದಾರೆ. ಕಟೀಲು ಮೇಳದ ಎಲ್ಲಾ ಕಲಾ ವಿದರು ಇವರಿಗೆ ವೇಷದಲ್ಲಿ ಸಹಾಯ ಮತ್ತು ಮಾರ್ಗದರ್ಶನವನ್ನು ನೀಡಿ ದ್ದಾರೆ. ಅದರಲ್ಲಿ ವೆಂಕಟೇಶ್ ಕಲ್ಲು ಗುಂಡಿ, ಸಂಜೀವ ಶಿರಕಲ್ಲು, ಬಾಲಕೃಷ್ಣ ಮಿಜಾರ್, ರಾಮ ಮುಕ್ಕ, ಪ್ರಶಾಂತ್ ನೆಲ್ಯಾಡಿ, ರಾಜೇಶ್ ಬೆಳ್ಳಾರೆ, ದೇವಿ ಪ್ರಸಾದ್ ಪೆರಾಜೆ, ಸದಾಶಿವ, ಲಕ್ಷಣ ಮುಚ್ಚೂರು, ಅಭಿಷೇಕ್ ಕಲ್ಲಡ್ಕ, ಅಭಿಷೇಕ್ ಪೂಜಾರಿ ನರಿಕೊಂಬು, ಶ್ರೇಯಸ್ ಪೂಜಾರಿ ಕಿನ್ನಿಗೋಳಿ, ಅಕ್ಷಯ್ ಮಿಜಾರ್, ಸುಚೇಂದ್ರ ಬಿ.ಸಿ. ರೋಡ್, ನವೀನ್ ಮುಂಡಾಜೆ, ನಾಗೇಶ್ ಮುಚ್ಚೂರು, ಪ್ರನೀತ್, ಪುನೀತ್ ಬೋಳಿಯಾರ್, ರಾಜೇಶ್ ಮೂಡ ಬಿದ್ರೆ, ಮಧುರಾಜ್ ಪೂಜಾರಿ ವಾಮ ದಪದವು, ಆರನೇ ಮೇಳದ ಸತೀಶ್, ಅಜಿತ್ ಪೂಜಾರಿ ಆರನೇ ಮೇಳದ ಭಾಗವತರು ಮೋಹನ್ ಕುಮಾರ್ ಶಿಶಿಲ ಮತ್ತಿತರ ಕಟೀಲು ಮೇಳದ ಮುಮ್ಮೇಳ ಹಾಗು ಹಿಮ್ಮೇಳದ ಕಲಾ ವಿದರು ವೇಷ ಮಾಡಿದಾಗ ಸಹಾಯ ಮಾಡಿರುತ್ತಾರೆ.ಮಾಂಟ್ರಾಡಿ ದುರ್ಗಾಪರಮೇಶ್ವರಿ ಅಮ್ಮನವರ ಬಲಿ ಉತ್ಸವದಲ್ಲಿ ಮಂದಾರ ಮೂಡಬಿದ್ರೆ ಇವರ ಒಟ್ಟಿಗೆ ಪಗಡಿ ವೇಷ ಮಾಡಿದ ಹೆಮ್ಮೆ ಇವರಿಗಿದೆ. ಶಾಂತ ಸ್ವಭಾವದ ಇವರು ಚೌಕಿಯಲ್ಲಿ ಶಾಂತ ರೀತಿಯಲ್ಲಿ ವರ್ತಿಸಿ ಹಿರಿಯರಿಗೆ ಕಿರಿಯರಿಗೆ ಯಾವುದೇ ಬೇಧ ಭಾವ ಇಲ್ಲದೆ ಗೌರ ವಿಸುವ ಇವರ ಗುಣವೇ ಮೆಚ್ಚು ವಂತದ್ದು.ಯಾವುದೇ ಹೆಸರಿಗೆ ಅಥವಾ ಸನ್ಮಾನಕ್ಕಾಗಲಿ ಪ್ರತಿಷ್ಟೆಗಾಗಲಿ ಇವರು ಆಸೆ ಪಟ್ಟವರಲ್ಲ, ನಾನು ಒಬ್ಬ ಒಳ್ಳೆ ಕಲಾವಿದ ಆಗಬೇಕು ಎನ್ನುವ ದೃಷ್ಟಿ ಯಲ್ಲಿ ಶಾಲೆಗೆ ಹೋಗುವ ಎಡೆಯಲ್ಲಿ ಯಕ್ಷಗಾನ ಕಲಿತು ಯಕ್ಷ ರಂಗದಲ್ಲಿ ವೇಷ ಮಾಡಿರುತ್ತಾರೆ, ಇನ್ನು ಅನೇಕ ಯಕ್ಷ ವಿದ್ಯೆಯನ್ನು ಕಲಿಯಲು ಬಾಕಿ ಇದೆ. ಇವರು ಶಾಲೆಗೆ ಬಿಡುವು ಇದ್ದಾಗ ಕಟೀಲು ಮೇಳದ ಯಕ್ಷಗಾನ ಸೇವೆ ಮಾಡಲು ಮತ್ತೆ ಅನುಭವಕ್ಕಾಗಿ ಸತತ ನಾಲ್ಕು ವರ್ಷಗಳಿಂದ ವೇಷ ಮಾಡುತ್ತಾ ಇದ್ದಾರೆ. ಮನೆಯಲ್ಲಿಯೂ ಸಮಯ ಸಿಕ್ಕಿದಾಗ ಮುಖಕ್ಕೆ ಬಣ್ಣ ಮತ್ತು ಧಿಗಿನ ಹಾಕಿ ಕಲಿಯುತ್ತಾರೆ. ಭವಿಷ್ಯದಲ್ಲಿ ಉತ್ತಮ ವೇಷದಾರಿ ಆಗಬೇಕು ಎಂಬ ಕನಸು ಇವರದು.

ಮಾಹಿತಿ:- ಸಚಿನ್, ಮೂಡುಬಿದ್ರೆ

Leave a Reply

Your email address will not be published. Required fields are marked *