ಬೈಕ್​ನಲ್ಲೇ ಜೋಡಿಯ ರೊಮ್ಯಾನ್ಸ್ ..! ಸುಮೋಟೋ ಕೇಸ್​ ರೋಡ್​ ರೋಮಿಯೋ ಅರೆಸ್ಟ್..!***

 ಮೈಸೂರು: ಬೈಕ್​ನಲ್ಲೇ ರೊಮ್ಯಾನ್ಸ್ ಮಾಡಿದ್ದ ಪ್ರೇಮಿ ಅರೆಸ್ಟ್ ,   ಹೆಲ್ಮೆಟ್ ಧರಿಸದೇ ಯದ್ವಾತದ್ವಾ ಓಡಿಸ್ತಿದ್ದ ಹಿನ್ನೆಲೆ ಬೈಕ್  ನಂಬರ್ ಪ್ಲೇಟ್ ಆಧಾರದಲ್ಲಿ ಪತ್ತೆ ಮಾಡಿ ಬಂಧಿಸಲಾಗಿದೆ.ಹೆದ್ದಾರಿಯಲ್ಲೇ ಬೈಕ್​ ಮೇಲೆ ರೊಮ್ಯಾನ್ಸ್​ ರೈಡ್​ ಪ್ರಕರಣಕ್ಕೆ ಸಂಬಂಧಿಸಿದಂತೆ  ಸುಮೋಟೋ ಕೇಸ್​ ದಾಖಸಿಲಿ ರೋಡ್​ ರೋಮಿಯೋ ಅರೆಸ್ಟ್ ಮಾಡಲಾಗಿದೆ.  H.D.ಕೋಟೆ ತಾಲೂಕು ಶಿವಪುರದ ಎಸ್.​ಸಿ ಸ್ವಾಮಿ ಎಂಬಾತನನ್ನ ಬಂಧಿಸಲಾಗಿದ್ದು,ಬೈಕ್ ಸಮೇತ ಯುವಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.  2 ದಿನದ ಹಿಂದೆ ಯಡಪುರ ಬಳಿ ಯುವತಿ ಜತೆ ಜಾಲಿ ರೇಡ್​ ಮಾಡಿದ್ದು,  ಬೈಕ್​ನ ಟ್ಯಾಂಕ್ ಮೇಲೆ ಹಿಮ್ಮುಖವಾಗಿ ಕೂರಿಸಿ ​ ರೈಡ್​ ಮಾಡಲಾಗಿತ್ತು.  ಹೆಲ್ಮೆಟ್ ಧರಿಸದೇ ಯದ್ವಾತದ್ವಾ ಬೈಕ್​​ ಓಡಿಸ್ತಿದ್ದ ಸ್ವಾಮಿ, ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು.  ಚಾಮರಾಜನಗರ ಟ್ರಾಫಿಕ್​​ ಪೊಲೀಸರಿಂದ ಸುಮೋಟೋ ಕೇಸ್​ ದಾಖಲಿಸಿಕೊಂಡು  ಬೈಕ್ ನಂಬರ್ ಆಧಾರದಲ್ಲಿ ಎಸ್​ಸಿ ಸ್ವಾಮಿ ಪತ್ತೆ ಹಚ್ಚಿ ಅರೆಸ್ಟ್ ಮಾಡಲಾಗಿದೆ.

Leave a Reply

Your email address will not be published. Required fields are marked *