ಬೀಕರ ರಸ್ತೆ ಅಪಘಾತ ಸ್ಥಳದಲ್ಲೇ 6ಮಂದಿ ಮೃತ್ಯು

ಸೋಮವಾರಪೇಟೆ : ಹುಣಸೂರಿನಲ್ಲಿ ನಡೆದ ಮದುವೆ ಕಾರ್ಯದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ ವೇಳೆ ಬುಲೇರೋ ವಾಹನ ಮರಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ 6ಮಂದಿ ಸಾವನ್ನಪ್ಪಿದ ಘಟನೆ ಇಂದು ನಡೆದಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಮರಕ್ಕೆ ಡಿಕ್ಕಿಹೊಡೆದ ರಭಸಕ್ಕೆ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ .ಮದುವೆ ಮುಗಿಸಿ ಪಾಲಿಬೆಟ್ಟ ಕಡೆಗೆ ಬರುತ್ತಿದ್ದಾಗ ಅರಸು ಕಲ್ಲಹಳ್ಳಿ ಬಳಿ ಅವಘಡ ಸಂಭವಿಸಿದೆ.ಮೃತರನ್ನು ರಾಜೇಶ್, ಅನಿಲ್, ಸಂತೋಷ್, ವಿನುತ್, ದಯಾನಂದ್, ಬಾಬು ಎಂದು ಗುರುತಿಸಲಾಗಿದೆ. ಇವರೆಲ್ಲರೂ ಕೊಡಗು ಜಿಲ್ಲೆಯ ಪಾಲಿಬೆಟ್ಟ ಗ್ರಾಮದವರು ಎಂದು ತಿಳಿದುಬಂದಿದೆ. ಹೆಚ್ಚಿನ ವಿವರಗಳಿಗಾಗಿ ಜಯಕಿರಣ ಪತ್ರಿಕೆ ಓದಿರಿ.

Leave a Reply

Your email address will not be published. Required fields are marked *