ಕೆ.ಜಿ.ಎಫ್. ಚಾಪ್ಟರ್ 2ರ ಪೋಸ್ಟರ್ ಬಿಡುಗಡೆ

ಮಂಗಳೂರು: ಐಮ್ಯಾಕ್ಸ್ ಕನ್ನಡ ಭಾಷೆಯ ಅತ್ಯಂತ ನಿರೀಕ್ಷೆಯ ಚಲನಚಿತ್ರ ಕೆ.ಜಿ.ಎಫ್. ಚಾಪ್ಟರ್ 2 ನ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದೆ. ಪ್ರಶಾಂತ್ ನೀಲ್ ಕಥೆ ಹಾಗೂ ನಿರ್ದೇಶನದ ಹೊಂಬಾಳೆ ಫಿಲ್ಮ್, ವಿಜಯ್ ಕಿರಗಂದೂರು ನಿರ್ಮಿಸಿರುವ ಕೆ.ಜಿ.ಎಫ್. ಚಾಪ್ಟರ್ 2ರಲ್ಲಿ ರಾಕಿಂಗ್ ಸ್ಟಾರ್ ಯಶ್, ಸಂಜಯ್ ದತ್ತ್‌, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್ ಮತ್ತು ಪ್ರಕಾಶ್ ರಾಜ್ ನಟಿಸಿದ್ದಾರೆ. ಕೋಲಾರದ ಚಿನ್ನದ ಗಣಿಗಳ ಹಿನ್ನೆಲೆಯ ಕಥೆಯನ್ನು ಹೊಂದಿರುವ ಇದು ಕೆ.ಜಿ.ಎಫ್. ಚಾಪ್ಟರ್ 1ರ ಮುಂದುವರಿದ ಭಾಗವಾಗಿದ್ದು ಕನ್ನಡ, ತೆಲುಗು, ಹಿಂದಿ ಭಾಷೆಗಳಲ್ಲಿ ಏಪ್ರಿಲ್ 14ರಂದು ಐಮ್ಯಾಕ್ಸ್ ಸ್ಕೀನ್‌ಗಳಲ್ಲಿ ಬಿಡುಗಡೆಯಾಗಲಿದೆ. ಕೆ.ಜಿ.ಎಫ್. ಚಾಪ್ಟರ್ 2ಐಮ್ಯಾಕ್ಷ್‌ನಲ್ಲಿ ಬಿಡುಗಡೆ ಮಾಡುವ ಕುರಿತು ಇಂಟರ್‌ನ್ಯಾಷನಲ್ ಡೆವಲಪ್‌ಮೆಂಟ್ ಅಂಡ್ ಡಿಸ್ಟ್ರಿಬ್ಯೂಷನ್‌ನ ಉಪಾಧ್ಯಕ್ಷ ಕ್ರಿಸ್ಟೋಫರ್ ಟಿಲ್‌ಮ್ಯಾನ್, ಐಮ್ಯಾಕ್ಸ್ ತನ್ನ ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡುವಲ್ಲಿ ಖ್ಯಾತಿ ಪಡೆದಿದೆ ಮತ್ತು ಕೆ.ಜಿ.ಎಫ್. ಚಾಪ್ಟರ್ 2ರಂತಹ ಆ್ಯಕ್ಷನ್ ಸನ್ನದ್ಧ ಚಲನಚಿತ್ರ ಬಿಡುಗಡೆ ಮಾಡುವುದು ನಮಗೆ ಅತ್ಯಂತ ಸೂಕ್ತವಾಗಿದೆ. ಐಮ್ಯಾಕ್ಸ್ ಅನುಭವವು ಪ್ರೇಕ್ಷಕರಿಗೆ ಅದ್ಭುತ ಚಲನಚಿತ್ರ ವೀಕ್ಷಿಸುವ ಅವಕಾಶ ನೀಡುತ್ತಿದೆ. ದೃಶ್ಯ ವೈಭವದ ಹಾಗೂ ಭಾವನಾತ್ಮಕವಾಗಿ ಸೆಳೆಯುವ ಕಥೆಗಳನ್ನು ಪ್ರಸ್ತುತಪಡಿಸುವಲ್ಲಿ ನಮ್ಮ ಬದ್ಧತೆಗೆ ಪೂರಕವಾಗಿದೆ ಎಂದರು. ಹೊಂಬಾಳೆ ಫಿಲ್ಮ್ ಪಾಲುದಾರ ಹಾಗೂ ಸಹ-ಸಂಸ್ಥಾಪಕ ಚಲುವೇಗೌಡ, ‘ಕೆ.ಜಿ.ಎಫ್.ಚಾಪ್ಟರ್2 ಐಮ್ಯಾಕ್ಷ್‌ನಲ್ಲಿ ಪ್ರದರ್ಶನಗೊಳ್ಳುತ್ತಿರುವ ಮೊದಲ ಕನ್ನಡ ಚಲನಚಿತ್ರ ಎನ್ನುವುದಕ್ಕೆ ನಾವು ಬಹಳ ಹೆಮ್ಮೆ ಪಡುತ್ತೇವೆ. ಈ ಚಲನಚಿತ್ರವು ಇತಿಹಾಸ ಸೃಷ್ಟಿಸುತ್ತದೆ ಎಂಬ ವಿಶ್ವಾಸ ನಮ್ಮದು. ಐಮ್ಯಾಕ್ಸ್ ಜೊತೆಯಲ್ಲಿ ನಮ್ಮ ಸಹಯೋಗ ನಮ್ಮ ಚಿಂತನೆಗಳಿಗೆ ಪೂರಕವಾಗಿದೆ.ವಿಶ್ವದಾದ್ಯಂತ ನಮ್ಮ ಅಭಿಮಾನಿಗಳಿಗೆ ಜಾಗತಿಕ ಮಟ್ಟದ ಕೊಡುಗೆ ನೀಡಲು ಶಕ್ತರಾಗಿದ್ದೇವೆ’ ಎಂದರು

Leave a Reply

Your email address will not be published. Required fields are marked *