ಕಲ್ಲಾಪು: ಮೀನು ಮಾರಾಟಗಾರನಿಂದ ತಲವಾರು ದಾಳಿ ನಡೆಸಿ ದರೋಡೆ

ಉಳ್ಳಾಲ: ಕಲ್ಲಾಪು ಬಳಿ ಮೀನು ಮಾರಾಟ ನಡೆಸುತ್ತಿರುವ ವ್ಯಾಪಾರಿಯನ್ನು ತಡೆದ ಮೂವರು ಮುಸುಕುಧಾರಿ ತಂಡ ತಲವಾರಿನಿಂದ ಕಡಿದು ಟೆಂಪೋದಲ್ಲಿದ್ದ ರೂ. ೨ ಲಕ್ಷ ದರೋಡೆ ನಡೆಸಿರುವ ಘಟನೆ ರಾ.ಹೆ.66 ರ ನೇತ್ರಾವತಿ ಸೇತುವೆ ಸಮೀಪ ಇಂದು ನಸುಕಿನ ಜಾವ ಸಂಭವಿಸಿದೆ.

ಉಳ್ಳಾಲ ಮುಕ್ಕಚ್ಚೇರಿ ಹೈದರಾಲಿ ರಸ್ತೆ ನಿವಾಸಿ ಮುಸ್ತಾಫ ದರೋಡೆಗೆ ಒಳಗಾದವರು. ರಾ.ಹೆ66 ರಕಲ್ಲಾಪು ಸಮೀಪ ಮೀನು ಮಾರಾಟ ನಡೆಸುತ್ತಿರುವ ಇವರು ಎಂದಿನಂತೆ ಮನೆಯಿಂದ ಧಕ್ಕೆಗೆ ಟೆಂಪೋ ಮೂಲಕ ಮೀನು ಖರೀದಿಸಲು ತೆರಳುತ್ತಿದ್ದರು. ಈ ವೇಳೆ ತೊಕ್ಕೊಟ್ಟು ಕಡೆಯಿಂದ ಕೆಂಪು ಬಣ್ಣದ ರಿಟ್ಝ್ ಕಾರಿನಲ್ಲಿ ತಂಡವೊಂದು ಟೆಂಪೋವನ್ನು ಹಿಂಬಾಲಿಸಿ ನೇತ್ರಾವತಿ ಸೇತುವೆ ಸಮೀಪ ಅಡ್ಡಗಟ್ಟಿದೆ. ಬಳಿಕ ನಿರಂತರ ಹಾನ್ ೯ ಹಾಕುವುದನ್ನು ಪ್ರಶ್ನಿಸಲು ಮುಸ್ತಾಫ ಅವರು ಕೆಳಗಿಳಿಯುತ್ತಿದ್ದಂತೆ ಕಾರಿನಲ್ಲಿದ್ದ ಮೂವರಲ್ಲಿ ಇಬ್ಬರು ಮುಸುಕುಧಾರಿಗಳು ಇಳಿದು ತಲವಾರಿನಿಂದ ದಾಳಿ ನಡೆಸಿದ್ದಾರೆ.ಅಲ್ಲದೆ ಟೆಂಪೋ ಡ್ಯಾಷ್ ಬೋರ್ಡಿನಲ್ಲಿರಿಸಿದ್ದ ರೂ. ೨ ಲಕ್ಷ ನಗದನ್ನು ಕಳವುಗೈದು ಪರಾರಿಯಾಗಿದ್ದಾರೆ. ಗಾಯಾಳು ಮುಸ್ತಾಫ ಅವರನ್ನು ಆಕ್ಟಿವಾ ಸ್ಕೂಟರಿನಲ್ಲಿದ್ದ ರಸ್ತೆ ಮೂಲಕ ತೆರಳುತ್ತಿದ್ದ ವ್ಯಕ್ತಿಯೋರ್ವರು ತಕ್ಷಣ ತೊಕ್ಕೊಟ್ಟು ನೇತಾಜಿ ಆಸ್ಪತ್ರೆ ಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಎಸಿಪಿ ದಿನಕರ್ ಶೆಟ್ಟಿ ನೇತೃತ್ಬದ ಪೊಲೀಸ್ ತಂಡ ತನಿಖೆ ಆರಂಭಿಸಿದೆ.

Leave a Reply

Your email address will not be published. Required fields are marked *