ಗೋ ಕಳ್ಳರಿಂದ ಪೊಲೀಸರ ಕೊಲೆ ಯತ್ನ

ಕಾರ್ಕಳ: ಮಾಳಹುಕ್ರಟ್ಟೆ ರಸ್ತೆ ಯಲ್ಲಿ ಶನಿವಾರ ರಾತ್ರಿ ಪಾಳಿಯಲ್ಲಿ ನಿರತರಾಗಿದ್ದ ಗ್ರಾಮಾಂತರ ಠಾಣಾಧಿಕಾರಿ ತೇಜಸ್ವಿ ಹಾಗೂ ಸಿಬ್ಬಂದಿಗಳ ಮೇಲೆ ಕಾರು ಚಲಾಯಿಸಲು ಮುಂದಾಗಿ ಕೊಲೆಗೆ‌ ಪ್ರಯತ್ನಿಸಿದ ಘಟನೆ ಸಂಭವಿಸಿದೆ. ಗೋಕಳವು ಜಾಲವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಕರ್ತವ್ಯ ನಿರತರಾಗಿದ್ದ ಅವಧಿಯಲ್ಲಿ ಈ ಕೃತ್ಯ ನಡೆದಿದೆ. ಅತೀ ವೇಗವಾಗಿ ಬಂದ ಕಾರು ಬ್ಯಾರಿಕೇಟ್ ಮೇಲೆ ಮುನ್ನುಗಿಸಿ ಮಾಳ ಕಡೆಗೆ ಚಲಾಯಿಸಿ ಹೋಗಿತು. ಕಾರನ್ನು ಹಿಂಬಾಲಿಸಿ ಇಬ್ಬರು ಆರೋಪಿ ಬಂಧಿಸಿ ಕಾರನ್ನು ವಶಕ್ಕೆ ತೆಗೆದಿದ್ದಾರೆ.

Leave a Reply

Your email address will not be published. Required fields are marked *