ನಿನ್ನೆಯಂತೆ ಇಂದು ಮೂಡಲಿದೆ ಬಾನಲ್ಲಿ ಬೆಳಕಿನ ಸರಣಿ

ಮಂಗಳೂರು: ಸೋಮವಾರ ಸಂಜೆ 7 ರ ಸುಮಾರಿಗೆ ರಾಜ್ಯದ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರಕನ್ನಡ, ಬಾಗಲಕೋಟೆ ಮತ್ತು ಚಿಕ್ಕಮಗಳೂರು ಕಡೆ ಆಕಾಶದಲ್ಲಿ ನಕ್ಷತ್ರಗಳು ಸಾಲಾಗಿ ಚಲಿಸುವಂತ ಅಪರೂಪದ ದೃಶ್ಯವು ಜನರಲ್ಲಿ ಕೌತುಕವನ್ನು ಸೃಷ್ಠಿಸಿತ್ತು. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದೆ. ನಿಜವಾಗಲೂ ಏನು ಎಂಬ ಜನರ ಪ್ರಶ್ನೆಗೆ ಉತ್ತರ ಇದು ಅಮೇರಿಕಾದ ಸ್ಪೇಸ್ ಎಕ್ಸ್ ಕಂಪನಿಯ ಕೃತಕ ಉಪಗ್ರಹಗಳು ಎಂದು ತಿಳಿದು ಬಂದಿದೆ.


ನಿನ್ನೆ ಆಕಾಶದಲ್ಲಿ ಗೋಚರವಾದ ಬೆಳಕಿನ ಸಾಲುಗಳು ಇಂದು ಸಂಜೆ 7.15ರ ಸುಮಾರಿಗೆ ಕಾಣಲಿದೆಯಂತೆ. ಇದು ಸ್ಟಾರ್ ಲಿಂಕ್ ಜಗತ್ತಿನಲ್ಲಿ ಉಪಗ್ರಹ ಆಧಾರಿತ ಇಂಟರ್‍ನೆಟ್ ಸೌಲಭ್ಯ ಒದಗಿಸಲು ಮುಂದಾಗಿದೆ. ಡಿ. 18ರಂದು ಅಮೆರಿಕಾದ ಕ್ಯಾಲಿಫೋರ್ನಿಯಾದಿಂದ 52 ಉಪಗ್ರಹಗಳನ್ನು ಹಾರಿಬಿಡಲಾಗಿತ್ತು. ಈ ಉಪಗ್ರಹಗಳು ತೀರಾ ಕೆಳಗೆ ಸುತ್ತುತ್ತಿರುತ್ತವೆ. ಅದೇ ಕಾರಣದಿಂದ ಭೂಮಿಗೆ ಸುಲಭವಾಗಿ ಕಾಣಿಸುತ್ತದೆ. ಎಲಾನ್ ಮಸ್ಕ್ ಮಾಲೀಕತ್ವದ ಬಾಹ್ಯಾಕಾಶ ಸಂಸ್ಥೆ ಅಮೇರಿಕಾದ ಸ್ಪೇಸ್ ಎಕ್ಸ್ ಉಡಾವಣೆ ಮಾಡಿದ ಸರಣಿ ಉಪಗ್ರಹಗಳ ಮಾಲೆಯಿದು. ಸ್ಟಾರ್ ಲಿಂಕ್ ಎಂಬ ಯೋಜನೆಯಡಿ 1,800ಕ್ಕೂ ಹೆಚ್ಚಿನ ಉಪಗ್ರಹಗಳನ್ನು ಇದುವರೆಗೆ ಉಡಾವಣೆ ಮಾಡಿದ್ದು, ಅವುಗಳಲ್ಲಿ 1,732 ಉಪಗ್ರಹಗಳು ತಮ್ಮ ನಿಗದಿತ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುತ್ತಿವೆ. 2018ರ ಫೆ.22 ರಂದು ಆರಂಭವಾದ ಈ ಯೋಜನೆಯಲ್ಲಿ ಹಲವು ಹಂತಗಳಲ್ಲಿ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದೆ.

Leave a Reply

Your email address will not be published. Required fields are marked *