ಮಡಿಕೇರಿ: ಕುಟ್ಟಪ್ಪ ಸಂಸ್ಮರಣೆ ಕಾರ್ಯಕ್ರಮ ಹಿಂದೂ ಸಂಘಟನೆಯಾ ಜಿಲ್ಲಾಧ್ಯಕ್ಷರು ಸೇರಿ ಹಲವರು ಪೊಲೀಸ್ ವಶ

ಮಡಿಕೇರಿ: ನವೆಂಬರ್ 10 ಕರಾಳ ದಿನ ಆಚರಣೆ ಹಿನ್ನೆಲೆ ಕೊಡಗು ಜಿಲ್ಲಾಡಳಿತ 144 ಸೆಕ್ಷನ್ ಜಾರಿ ಮಾಡಿ ಆದೇಶ ಹೊರಡಿಸಿತ್ತು. ವಿಶ್ವಹಿಂದೂ ಪರಿಷತ್ ಹಾಗು ಹಿಂದು ಪರ ಸಂಘಟನೆಗಳು ಕುಟ್ಟಪ್ಪನವರ ಹುತಾತ್ಮ ದಿನ ಆಚರಣೆ ಹಾಗು ಮೆರವಣಿಗೆ ಹಮ್ಮಿಕೊಂಡಿತ್ತು. ಓಂಕಾರೇಶ್ವರ ದೇವಾಲಯದಲ್ಲಿ ಶಾಂತಿ ಪೂಜೆ ನೆರವೇರಿಸಿ ಹೊರಬರುತ್ತಿದ್ದಂತೆ ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಸೇರಿದಂತೆ ಹತ್ತು ಮಂದಿ ಹಿಂದು ಪರ ಸಂಘಟನೆಯ ಮುಖಂಡರನ್ನು ಪೋಲೀಸರು ಬಂಧಿಸಿದ್ದಾರೆ.





ಇನ್ನೊಂದು ಕಡೆ ಕುಟ್ಟಪ್ಪ ಸಂಸ್ಮರಣೆ ಕಾರ್ಯಕ್ರಮ ದಲ್ಲಿ ಭಾಷಣ ಮಾಡಲು ತೆರಳುತ್ತಿದ್ದ ಪ್ರಮುಖ ವಾಗ್ಮಿಶ್ರೀಕಾಂತ್ ಶೆಟ್ಟಿ ಮತ್ತು ಪ್ರಕಾಶ್ ಕುಕ್ಕೆ ಹಳ್ಳಿ ಅವರನ್ನು ಮಡಿಕೇರಿ ಸಂಪರ್ಕಿಸುವ ರಸ್ತೆ ಮದ್ಯೆಯೇ ವಾಹನ ಅಡ್ಡಗಟ್ಟಿ ಕೊಡಗು ಪೊಲೀಸರು ವಶಕ್ಕೆ ಪಡೆದಿದ್ದಾರೆ . ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಹಾಗು ಮೆರವಣಿಗೆಯನ್ನು ಹಿಂದು ಪರ ಸಂಘಟನೆಗಳು ಘೋಷಿಸಿರುವ ಹಿನ್ನೆಲೆ ಇದೀಗ ಸಂಘಟನೆಯ ಪ್ರಮುಖರ ಬಂಧನದಿಂದ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಆಕ್ರೋಶಗೊಳ್ಳುವಂತೆ ಮಾಡಿದೆ.