ಪುನೀತ್ ರಾಜ್ಕುಮಾರ್ ನಿರ್ಮಾಣದ ಕೊನೆಯ ಸಿನಿಮಾ ಯಾವುದು ಗೊತ್ತಾ ?

ಬೆಂಗಳೂರು: ಕನ್ನಡ ಸಿನಿಮಾ ರಂಗಕ್ಕೆ ಮಾತ್ರವಲ್ಲದೆ, ದೇಶದ ಚಿತ್ರರಂಗಕ್ಕೆ ಆಘಾತ ಉಂಟುಮಾಡಿದ್ದ ಪುನೀತ್ ರಾಜ್ಕುಮಾರ್ರ ನಿಧನದಿಂದ ‘ಮ್ಯಾನ್ ಆಫ್ ದಿ ಮ್ಯಾಚ್ ‘ಸಿನಿಮಾ ತಂಡ ಇನ್ನೂ ಚೇತರಿಸಿಕೊಂಡಿಲ್ಲ. ಆ ಚಿತ್ರತಂಡದೊಂದಿಗೆ ಪುನೀತ್ ಬೆರೆಯುತ್ತಿದ್ದ ರೀತಿ ಹಾಗೂ ಹೊಂದಿದ್ದ ಪ್ರೀತಿಯ ಸಂಬಂಧವೇ ಇದಕ್ಕೆ ಮುಖ್ಯ ಕಾರಣ.







ಪುನೀತ್ರ ಪಿಆರ್ಕೆ ಬ್ಯಾನರ್ ನಲ್ಲಿಯೇ ಈ ಸಿನಿಮಾವನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಪ್ರಕಾಶ್ ನಿರ್ದೇಶಿಸಿದ್ದಾರೆ. ಚಿತ್ರ ಈಗಾಗಲೇ ಸೆನ್ಸಾರ್ ಆಗಿ ‘ಯು ಸರ್ಟಿಫಿಕೇಟ್ ಪಡೆದಿದೆ. ಪುನೀತ್ ನಿರ್ಮಾಣದ ಕೊನೆಯ ಸಿನಿಮಾ ಇದೇ ಆಗಿತ್ತು ಎಂಬುವುದು ಕೂಡ ಉಲ್ಲೇಖನೀಯ ಸಂಗತಿ. ಬಹುತೇಕ ಹೊಸ ಕಲಾವಿದರೇ ತುಂಬಿರುವ ಈ ತಂಡದೊಂದಿಗೆ ಪುನೀತ್ ಆತ್ಮೀಯ ಸಂಬಂಧ ಹೊಂದಿದ್ದರು. ಶೂಟಿಂಗ್ ಸ್ಥಳಕ್ಕೂ ಬಂದು ಕಲಾವಿದರ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದರು. ತಾನೋರ್ವ ಸ್ಟಾರ್ ನಟನಾಗಿದ್ದರೂ ಹೊಸಬರೊಂದಿಗೆ ನಡೆದುಕೊಳ್ಳುತ್ತಿದ್ದ ಆತ್ಮೀಯತೆಗೆ ಇಡೀ ಚಿತ್ರತಂಡ ಮಾರು ಹೋಗಿತ್ತು. ಅವರೊಂದಿಗೆ ಕಳೆದಿದ್ದ ಕ್ಷಣಗಳನ್ನು ಮೆಲುಕು ಹಾಕುತ್ತಾ ಈಗಲೂ ಈ ಚಿತ್ರತಂಡದವರು ದುಃಖ ಪಡುತ್ತಿದ್ದಾರೆ.
ಅವರು ಅಷ್ಟು ದೊಡ್ಡ ಸ್ಟಾರ್ ನಟನಾಗಿದ್ದರೂ, ಸಿನಿಮಾಕ್ಕೆ ಬಂಡವಾಳ ಹೂಡಿದವರಾಗಿದ್ದರೂ ಕಿಂಚಿತ್ ಅಹಂ ಇಲ್ಲದೆ ನಮ್ಮೊಂದಿಗೆ ಆತ್ಮೀಯತೆಯಿಂದ ಬೆರೆಯುತ್ತಿದ್ದರು ಹಾಗೂ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದರು. ಅಂಥವರು ಇನ್ನು ನಮ್ಮೊಂದಿಗಿಲ್ಲ ಎನ್ನುವುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ಸಿನಿಮಾ ತಂಡ ಕಣ್ಣೀರಿಡುತ್ತಿದೆ
‘ಮ್ಯಾನ್ ಆಫ್ ದಿ ಮ್ಯಾಚ್ನಲ್ಲಿ ಶ್ರೀದತ್ತ, ನಟರಾಜ್, ಧರ್ಮಣ್ಣ, ವೀಣಾ ಸುಂದರ್, ಸುಂದರ್ ವೀಣಾ, ಅಥರ್ವ ಪ್ರಕಾಶ್, ಮಯೂರಿ ನಟರಾಜ್, ಬೃಂದಾ ವಿಕ್ರಮ್, ಚಂದ್ರ ಶೇಖರ್ ಮಧುಭಾವಿ, ಮಂಜುನಾಥ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಇವರೆಲ್ಲರನ್ನೂ ಪುನೀತ್ ನೆನಪು ಗಾಢವಾಗಿ ಕಾಡುತ್ತಿದೆ. ಚಿತ್ರ ಬಿಡುಗಡೆ ದಿನ ಹತ್ತಿರವಾಗುತ್ತಿರುವಾಗ ನಮಗೆಲ್ಲ ಪ್ರೇರಣಾಶಕ್ತಿಯಾಗಿದ್ದ ಪುನೀತ್ ಸರ್ ನಮ್ಮಿಂದ ದೂರವಾ ಗಿದ್ದಾರಲ್ಲ ಎಂಬ ನೋವು ಅವರನ್ನು ಕಾಡುತ್ತಲೇ ಇದೆ.
ಪಿಆರ್ಕೆ ಬ್ಯಾನರ್ನಲ್ಲಿ ನಿರ್ಮಾಣವಾದ ಕೊನೆಯ ಸಿನಿಮಾವಿದು


ಪುನೀತ್ ಇಷ್ಟಪಟ್ಟು ನಿರ್ಮಾಣ ಮಾಡಿದ ಚಿತ್ರ
ನಿರ್ದೇಶಕ ಸತ್ಯಪ್ರಕಾಶ್ ‘ಮ್ಯಾನ್ ಅಫ್ ದಿ ಮ್ಯಾಚ್ ಚಿತ್ರದ ಕಥೆ ಹೇಳಿದಾಗ ಪುನೀತ್ ರಾಜ್ಕುಮಾರ್ ಕಥೆಯನ್ನು ಮೆಚ್ಚಿಕೊಂಡಿದ್ದರು. ಈ ಚಿತ್ರದ ಬಗ್ಗೆ ಅಪಾರ ಭರವಸೆ ಇಟ್ಟು ಕೊಂಡೇ ತನ್ನ ಸ್ವಂತ ಬ್ಯಾನರ್ ಆದ ‘ಪಿಆರ್ಕೆ ಮುಖಾಂತರ ಚಿತ್ರ ನಿರ್ಮಾಣಕ್ಕೆ ಇಳಿದರು. ಪುನೀತ್ ಅವರಿಗೆ ಈ ಚಿತ್ರದ ಬಗ್ಗೆ ಅದೆಷ್ಟು ಆಸಕ್ತಿ ಇತ್ತೆಂದರೆ ಆಗಾಗ ಚಿತ್ರೀಕರಣದ ಸ್ಥಳಕ್ಕೆ ಕುತೂಹಲಿಗರಾಗಿ ಬರುತ್ತಿದ್ದರು. ಬಹುತೇಕ ಹೊಸ ಕಲಾವಿದರೇ ತುಂಬಿದ ‘ಮ್ಯಾನ್ ಅಫ್ ದಿ ಮ್ಯಾಚ್ ಚಿತ್ರಕ್ಕೆ ತಾಂತ್ರಿಕವಾಗಿ ನಾಲ್ಕು ಕ್ಯಾಮರಾಗಳನ್ನು ಏಕಕಾಲದಲ್ಲಿ ಬಳಸಿದ್ದು ಕೂಡಾ ಮೊದಲ ಬಾರಿಯಾಗಿತ್ತು. ಚಿತ್ರಕ್ಕೆ ಬಳಸುತ್ತಿದ್ದ ತಾಂತ್ರಿಕ ಅಂಶಗಳ ಬಗ್ಗೆಯೂ ಪುನೀತ್ ಆಸಕ್ತರಾಗಿದ್ದರು. ಈಗ ಏಕಾಏಕಿ ಪುನೀತ್ ರಾಜ್ಕುಮಾರ್ ಅವರ ಹಠಾತ್ ನಿರ್ಗಮನ ‘ಮ್ಯಾನ್ ಅಫ್ ದಿ ಮ್ಯಾಚ್ ಚಿತ್ರ ತಂಡವನ್ನು ದುಃಖಕ್ಕೆ ದೂಡಿದೆ. ಪುನೀತ್ ಆತ್ಮಕ್ಕೆ ಶಾಂತಿ ಕೋರಿ ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಚಿತ್ರ ತಂಡ ಪ್ರಾರ್ಥಿಸಿದೆ.