ಕಾಲೇಜು ಬಳಿ ಸೌಹಾರ್ದ ಜೋಡಿಗಳಿಗೆ ಮತ್ತೆ ಬಜರಂಗದಳ ಹಲ್ಲೆ ಆರೋಪ ?? ಇಬ್ಬರು ಬಜರಂಗಿಗಳ ಬಂಧನ

ಮಂಗಳೂರು: ಕದ್ರಿ ಠಾಣಾ ವ್ಯಾಪ್ತಿಯ ಸೈಂಟ್ ಆಗ್ನೇಸ್ ಬಳಿ ನಿನ್ನೆ ರಾತ್ರಿ ಅಶ್ಲೀಲವಾಗಿ ವರ್ತಿಸುತ್ತಿದ್ದ ಜೋಡಿಗಳಿಗೆ ಬಜರಂಗದಳದ ಕಾರ್ಯಕರ್ತರು ಬುದ್ದಿ ಹೇಳಿ ಪೋಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಆದರೆ ಜೋಡಿಗಳ ಜೊತೆ ಪೋಲೀಸ್ ಸ್ಟೇಷನ್ ಗೆ ತೆರಳಿದ ಕಾರ್ಯಕರ್ತರ ಮೇಲೆಯೇ ಮತ್ತೆ ಆ ಜೋಡಿ ಬಜರಂಗದಳದ ಕಾರ್ಯಕರ್ತರು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದು .ಇಬ್ಬರು ಬಜರಂಗದಳದ ಕಾರ್ಯಕರ್ತರನ್ನು ಪೊಲೀಸರು ನಿನ್ನೆ ಬಂದಿಸಿದ್ದಾರೆ . ರಾಸಲೀಲೆಯಲ್ಲಿ ತೊಡಗಿದ್ದ ಜೋಡಿಯನ್ನು ನಾವು ಪೋಲಿಸರಿಗೆ ಒಪ್ಪಿಸಿದರೂ ನಮ್ಮ ಮೇಲೆಯೇ ಪ್ರಕರಣ ದಾಖಲಿಸಿ ಕೊಂಡಿದ್ದಾರೆ ಎಂದು ಪೋಲಿಸರ ಮೇಲೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *