ಎನ್ಆರ್ಸಿ ಗಲಭೆ, ಪೊಲೀಸರಿಗೆ ಕ್ಲೀನ್ಚಿಟ್

ಜಯಕಿರಣ ವರದಿ
ಮಂಗಳೂರು: 2019 ರಲ್ಲಿ ಮಂಗಳೂರಿನಲ್ಲಿ ನಡೆದಿದ್ದ ಎನ್ಆರ್ಸಿ, ಸಿಎಎ ಗಲಭೆಯಲ್ಲಿ ಪೊಲೀಸರ ಯಾವುದೇ ಪಾತ್ರ ಇಲ್ಲ ಎಂದು ರಾಜ್ಯ ಸರಕಾರ ಹೈಕೋರ್ಟ್ಗೆ ತಿಳಿಸುವ ಮೂಲಕ ಪೊಲೀಸ್ ಇಲಾಖೆಗೆ ಕ್ಲೀನ್ಚಿಟ್ ನೀಡಿದೆ.

2019 ರ ಡಿಸೆಂಬರ್ 20ರಂದು ಮಂಗಳೂರಿನಲ್ಲಿ ಕೆಲವು ಸಂಘಟನೆಗಳು ಸಿಎಎ, ಎನ್ಆರ್ಸಿ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದರು. ಈ ಸಂದರ್ಭ ನಡೆದ ಹಿಂಸಾಚಾರ ತಡೆಯುವ ನಿಟ್ಟಿನಲ್ಲಿ ಪೊಲೀಸರು ಗೋಲಿಬಾರ್ ನಡೆಸಿದ್ದು, ಜಲೀಲ್ ಮತ್ತು ನೌಶೀನ್ ಎಂಬವರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ಅಂದು ಹರ್ಷ ಅವರು ಮಂಗಳೂರು ಪೊಲೀಸ್ ಕಮಿಷನರ್ ಆಗಿದ್ದರು.

ಈ ಘಟನೆಯ ಬಳಿಕ ಕಮಿಷನರ್ ವಿರುದ್ಧ ವ್ಯಾಪಕ ಆಕ್ರೋಶ, ಟೀಕೆ, ಆರೋಪಗಳ ಸುರಿಮಳೆಗೈಯ್ಯಲಾಗಿತ್ತು. ಘಟನೆಗೆ ಪೊಲೀಸ್ ಇಲಾಖೆಯೇ ಕಾರಣ ಎಂದು ಆರೋಪಿಸಲಾಗಿತ್ತು. ಕೆಲವು ಸಂಘಟನೆಗಳು ಮಾತ್ರವಲ್ಲದೆ, ರಾಜಕೀಯ ಪಕ್ಷಗಳಿಂದಲೂ ಟೀಕೆ ವ್ಯಕ್ತವಾಗಿತ್ತು. ಈ ಪ್ರಕರಣದ ತನಿಖೆಯನ್ನು ಮೆಜಿಸ್ಟ್ರೇಟ್ಗೆ ವಹಿಸಿದ ಸರಕಾರ, ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಜಗದೀಶ್ ಅವರನ್ನು ತನಿಖಾಧಿಯನ್ನಾಗಿ ನೇಮಿಸಿತ್ತು.
ಒಂದೂವರೆ ವರ್ಷ ಸುದೀರ್ಘ ತನಿಖೆ ನಡೆಸಿದ ತನಿಖಾಧಿಕಾರಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸರಕಾರಕ್ಕೆ ಸಲ್ಲಿಸಿದ್ದರು. ಇದೀಗ ಸರಕಾರವೂ ಹೈಕೋರ್ಟ್ಗೆ ನೀಡಿದ ವರದಿಯಲ್ಲಿ ಘಟನೆಗೆ ಪೊಲೀಸ್ ಇಲಾಖೆ ತಪ್ಪಿತಸ್ಥವಲ್ಲ ಎಂದು ವರದಿ ನೀಡಿದೆ. ಸರಕಾರ ಇಲಾಖೆಯ ಕ್ರಮವನ್ನು ಸಮರ್ಥಿಸಿದ್ದು, ಕಮಿಷನರ್ ಹರ್ಷ ವಿರುದ್ಧ ಆರೋಪ ಮಾಡಿದವರಿಗೆ ಮುಖಭಂಗವಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಅದು ಸರಕಾರದ ತೀರ್ಮಾನ ಆಷ್ಟೇ ನ್ಯಾಯಾಲಯ ಪೊಲೀಸರಿಗೆ ಕ್ಲೀನ್ ಚೀಟ್ ನೀಡಿಲ್ಲಾ ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆ ಬಾಕಿ ಇದೆ.ಮುಸ್ಲಿಮ್ ವಿರೋಧಿ ಪೊಲೀಸರಿಂದ ನಡೆದ ಗೋಲಿಬಾರ್ ಪ್ರಕರಣವನ್ನು ಮುಸ್ಲಿಮ್ ವಿರೋಧಿ ಸರಕಾರ ಸಮರ್ತಿಸುವುದರಿಂದ ಸರಕಾರ ಪೊಲೀಸರಿಂದ ನಡೆಸಿದ ಹತ್ಯೆಯಾಗಿದೆ .