ಸುರತ್ಕಲ್: ಕೊರೋನಾಕ್ಕೆ ಹೆದರಿ ದಂಪತಿ ಫ್ಲ್ಯಾಟ್ ನಲ್ಲೇ ನೇಣಿಗೆ ಶರಣು!

ಸುರತ್ಕಲ್: ತಮಗೆ ಕೊರೋನಾ ಸೋಂಕಿನ ಎಲ್ಲ ಲಕ್ಷಣಗಳು ಇವೆ ತಾವಿನ್ನೂ ಬದುಕುವುದಿಲ್ಲ ಎಂದು ಪತ್ರ ಬರೆದಿಟ್ಟು ದಂಪತಿ ಫ್ಲ್ಯಾಟ್ ನಲ್ಲೇ ನೇಣು ಬಿಗಿದು ಸಾವಿಗೆ ಶರಣಾದ ಘಟನೆ ನಿನ್ನೆ ತಡರಾತ್ರಿ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಬಳಿ ನಡೆದಿದೆ. ಸಾವಿಗೀಡಾದವರನ್ನು ರಮೇಶ ಸುವರ್ಣ(39) ಹಾಗೂ ಗುಣ ಆರ್ ಸುವರ್ಣ(32) ಎಂದು ಹೆಸರಿಸಲಾಗಿದೆ.ಹೊಸಬೆಟ್ಟು ಬಳಿಯ “ರಹೇಜಾ ವಾಟರ್ ಫ್ರಂಟ್ ” ವಸತಿ ಸಮುಚ್ಚಯದಲ್ಲಿ ವಾಸವಿದ್ದ ದಂಪತಿ ಹಿಂದೆ ಮುಂಬೈಯಲ್ಲಿ ಉದ್ಯಮ ನಡೆಸುತ್ತಿದ್ದು ಬಳಿಕ ಇಲ್ಲಿಗೆ ವಾಪಾಸ್ ಆಗಿದ್ದರೆನ್ನಲಾಗಿದೆ.
ಸ್ಥಳೀಯರ ಪ್ರಕಾರ ವ್ಯವಹಾರ ನಷ್ಟ ಆರ್ಥಿಕ ಸಂಕಷ್ಟ ಕೂಡ ಕಾರಣವಾಗಿರುವ ಸಾಧ್ಯತೆಗಳಿವೆ. ಗುಣ ಆರ್ ಸುವರ್ಣ ಎರಡು ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದು ಅದರಲ್ಲಿ ತಮ್ಮ ಆರೋಗ್ಯ ಸಮಸ್ಯೆಯನ್ನು ಉಲ್ಲೇಖಿಸಿದ್ದಾರೆ. ಅಂತ್ಯಕ್ರಿಯೆಗೆ 1 ಲಕ್ಷ ರೂ. ಇಟ್ಟಿದ್ದು ಬಜರಂಗದಳ ಮುಖಂಡ ಶರಣ್ ಪಂಪವೆಲ್, ಸತ್ಯಜಿತ್ ಸುರತ್ಕಲ್ ಅಂತ್ಯಕ್ರಿಯೆ ನಡೆಸಬೇಕು ಎಂದಿದ್ದಾರೆ.
