ಶಾಸಕ ಭರತ್ ಶೆಟ್ಟರೇ ಉತ್ತರಿಸಿ…!

ಒಂದು ಪತ್ರ ಮುನೀರ್ ಕಾಟಿಪಳ್ಳ

ಐಟಿ ಪಾರ್ಕ್ ನಿರ್ಮಾಣ ನಗರ ಪಾಲಿಕೆಯ ಕೆಲಸ ಅಲ್ಲ. ಅದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸಂಬಂಧಪಟ್ಟದ್ದು. ಓರ್ವ ಶಾಸಕ ತನ್ನ ಕ್ಷೇತ್ರದಲ್ಲಿ ಐಟಿ ಪಾರ್ಕ್ ನಿರ್ಮಿಸುವ ಆಸಕ್ತಿ ಹೊಂದಿದ್ದರೆ ರಾಜ್ಯ ಸರಕಾರದ ಮಟ್ಟದಲ್ಲಿ ವ್ಯವಹ ರಿಸಬೇಕು, ವಿಧಾನ ಸಭೆಯಲ್ಲಿ ವಿಷಯ ಪ್ರಸ್ತಾಪನೆ ಮಾಡಬೇಕು. ಅದನ್ನು ನಗರ ಪಾಲಿಕೆಗೆ ತರುವುದಲ್ಲ.
ಆದರೆ, ನಮ್ಮ ಮಂಗಳೂರು ನಗರ (ಉತ್ತರ) ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಮಂಗಳೂರು ನಗರ ಪಾಲಿಕೆ ಐಟಿ ಪಾರ್ಕ್ ನಿರ್ಮಿಸಬೇಕು, ಅದಕ್ಕಾಗಿ ಮಂಗಳೂರು ಪಾಲಿಕೆಯ ಗ್ರಾಮೀಣ ಪ್ರದೇಶ (ನಗರದಿಂದ ಸುಮಾರು ಹದಿನೈದು ಕಿ.ಮೀ. ದೂರ) ಕುಂಜತ್ತಬೈಲ್‌ನಲ್ಲಿ ಹತ್ತು ಎಕರೆ ಜಮೀನು ಖಾಸಗಿ ವ್ಯಕ್ತಿಯಿಂದ ಟಿ.ಡಿ.ಆರ್. ಮೂಲಕ ಖರೀದಿ ಮಾಡಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಅದಕ್ಕಾಗಿ ಜು. 29, 2021 ನಡೆಯಲಿರುವ ನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಐಟಿ ಪಾರ್ಕ್‌ಗಾಗಿ ಟಿ.ಡಿ.ಆರ್. ನಿಯಮದ ಅಡಿ ಜಮೀನು ಖರೀದಿಸಲು ಸರಕಾರದ ಅನುಮತಿ ಕೋರಲು ಶಾಸಕರು ಅಜೆಂಡಾ ಇರಿಸಿದ್ದಾರೆ. ಇದು ಖಂಡಿತವಾಗಿಯೂ ದೊಡ್ಡ ಹಗರಣ.
ಶಾಸಕರು ನೂರಾರು ಕೋಟಿಯ ರಿಯಲ್ ಎಸ್ಟೇಟ್ ಆಸಕ್ತಿಯಿಂದಲೇ ಈ ಯೋಜನೆಯನ್ನು ನಿಯಮ ಬಾಹಿರ ವಾಗಿ ನಗರ ಪಾಲಿಕೆಯ ಮೂಲಕ ಸಾಧಿಸಲು ಹೊರಟಿ ದ್ದಾರೆ. ದೇಶದ ಯಾವ ನಗರ ಪಾಲಿಕೆಗಳೂ, ಸ್ಥಳೀಯ ಆಡಳಿತಗಳೂ ಐಟಿ ಪಾರ್ಕ್ ನಿರ್ಮಿಸಲು ಮುಂದಾದ ಉದಾಹರಣೆ ಇಲ್ಲ. ಇದು ನಗರ ಪಾಲಿಕೆಯ ಕೆಲಸವೂ ಅಲ್ಲ. ನಗರದಿಂದ ತುಂಬಾ ದೂರ ಇರುವ 10 ಎಕರೆ ಜಮೀನಿಗೆ ನಗರ ಪಾಲಿಕೆ ಟಿ.ಡಿ.ಆರ್. ನೀಡುವುದು ಅಂದರೆ ತಮಾಷೆಯ ಮಾತಲ್ಲ. ಇದು ಯಾರ ಹಿತಾಸಕ್ತಿಯ ರಕ್ಷಣೆಗೆ? ಶಾಸ ಕರು ನೇರವಾಗಿ ತಮ್ಮದೇ ರಾಜ್ಯ ಸರಕಾ ರದ ಮಟ್ಟದಲ್ಲಿ ಐಟಿ ಪಾರ್ಕ್ ಯೋಜನೆ ಜಾರಿಗೆ ಯತ್ನಿಸಲಿ. ನಗರ ಪಾಲಿಕೆಯ ಆಡಳಿತದ ದುರ್ಬಳಕೆ ಸಲ್ಲದು.
ಇಲ್ಲಿ ಇನ್ನೂ ತಮಾಷೆ ಹಾಗೂ ಆಸಕ್ತಿಕರ ಸಂಗತಿ ಅಂದರೆ, ಅಜೆಂಡಾ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮಂಡನೆಯಾಗುವ ಮುಂಚಿತವಾಗಿಯೇ, ಶಾಸಕರ ಟಿಪ್ಟಣಿಯ ಆಧಾರದಲ್ಲಿ “ಸಾಮಾನ್ಯ ಸಭೆಯ ಪೂರ್ವಾನುಮತಿ ನಿರೀಕ್ಷಿಸಿ” ಮಾನ್ಯ ಮೇಯರ್ ಅವರು ಜಮೀನು ಟಿ.ಡಿ.ಆರ್. ಅಡಿ ಖರೀದಿಸಲು ರಾಜ್ಯ ಸರಕಾರಕ್ಕೆ ಅನುಮತಿ ಕೋರಿ ಪ್ರಸ್ತಾವನೆ ಕಳುಹಿಸಿರುವುದು. ಮಾನ್ಯ ಮೇಯರ್ ಅವರಿಗೆ ಸಾಮಾನ್ಯ ಸಭೆಯಲ್ಲಿ ಈ ಅಜೆಂಡಾಕ್ಕೆ ಅನುಮತಿ ಸಿಗುತ್ತದೆ ಎಂದು ಮೊದಲೇ ಕನಸು ಬಿದ್ದಿರುವುದು ಹೇಗೆ? ನಾಲ್ಕು ದಿನ ಕಾಯಲು ಸಾಧ್ಯವಾಗದೆ ತರಾತುರಿಯಲ್ಲಿ ಪ್ರಸ್ತಾವನೆ ರಾಜ್ಯ ಸರಕಾರಕ್ಕೆ ಕಳುಹಿಸಲು ತುರ್ತಾದ ಗಂಭೀರ ಸನ್ನಿವೇಶ ಇದರಲ್ಲಿ ಏನಿತ್ತು? ಇದೇನು ವಿಪತ್ತಿಗೆ ಸಂಬಂಧಿಸಿದ ವಿಷಯವೇ?
ಇನ್ನು ಪಾಲಿಕೆಯ ವಿರೋಧ ಪಕ್ಷದ ಕೆಲವು ಪ್ರಮುಖ ಸದಸ್ಯರೂ ಈ ವಿಷಯದಲ್ಲಿ ಶಾಸಕ ಭರತ್ ಶೆಟ್ಟರೊಂದಿಗೆ “ಹೊಂದಾಣಿಕೆ” ಆಗಿದ್ದಾರೆ ಎಂಬ ಗುಸುಗುಸು ಪಾಲಿಕೆಯ ವರಾಂಡದಲ್ಲಿ ಹರಿದಾಡುತ್ತಿದೆ. ಕಾಂಗ್ರೆಸ್‌ನ ಹಿರಿಯರು ಇತ್ತ ಗಮನಿಸುವುದು ಒಳ್ಳೆಯದು. ಇದನ್ನೆಲ್ಲ ಕಾಣುವಾಗ ಮಂಗಳೂರು ಪಾಲಿಕೆ ಐಟಿ ಪಾರ್ಕ್ ನಿರ್ಮಾಣ, ಅದಕ್ಕಾಗಿ ಟಿ.ಡಿ.ಆರ್. ಅಡಿ ಹತ್ತು ಎಕರೆ ಜಮೀನು ಖರೀದಿಸುವ ತರಾತುರಿ ಕಾಣುವಾಗ ಇದು ಬಹುದೊಡ್ಡ ರಿಯಲ್ ಎಸ್ಟೇಟ್ ಹಗರಣದಂತೆ ಕಾಣುತ್ತಿದೆ. ಶಾಸಕರ ನಡವಳಿಕೆ ಅನುಮಾನಾಸ್ಪದ ವಾಗಿದೆ. ನಗರದ ಜನತೆ ಎಚ್ಚರಗೊಳ್ಳಬೇಕಿದೆ.

Leave a Reply

Your email address will not be published. Required fields are marked *