ಉಳ್ಳಾಲ: ನಿಲ್ಲಿಸಿದ್ದ ಆಂಬ್ಯುಲೆನ್ಸ್ ಹಾನಿಗೊಳಿಸಿ ಸೊತ್ತುಗಳ ಕಳವು

ಉಳ್ಳಾಲ: ನಿಲ್ಲಿಸಿದ್ದ ಆಂಬ್ಯುಲೆನ್ಸ್ ನ ಗಾಜು ಒಡೆದು ಒಳಗಿದ್ದ ಪರಿಕರಗಳನ್ನು ಕಳವು ನಡೆಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಮುಕ್ಕಚ್ಚೇರಿ ಬಳಿ ನಡೆದಿದೆ.ಮಂಗಳೂರು ಗಂಗಾಧರ್ ಅವರಿಗೆ ಸೇರಿದ ಶ್ರೀ ಗಣೇಶ್ ಆಂಬ್ಯುಲೆನ್ಸ್ ಗೆ ಹಾನಿ ನಡೆಸಿ ಕಳವು ನಡೆಸಲಾಗಿದೆ. ಮುಕ್ಕಚ್ಚೇರಿ ನಿವಾಸಿ ರಹೀಂ ಎಂಬವರು ಚಲಾಯಿಸುತ್ತಿದ್ದ ಆಂಬ್ಯುಲೆನ್ಸ್ ಅನ್ನು ಅವರ ಮನೆ ಸಮೀಪ ನಿಲ್ಲಿಸಿದ್ದರು. ನಿನ್ನೆ ತಡರಾತ್ರಿ 8.30 ಸುಮಾರಿಗೆ ಆಂಬ್ಯುಲೆನ್ಸ್ ನಿಲ್ಲಿಸಿ ಚಾಲಕ ರಹೀಂ ತೆರಳಿದ್ದು, ಬೆಳಿಗ್ಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಆಂಬ್ಯುಲೆನ್ಸ್ ನ ಸುತ್ತ ಗಾಜು ಒಡೆದಿರುವ ದುಷ್ಕರ್ಮಿಗಳು ಸೈರನ್ ಆಂಪ್ಲಿಫೈಯರ್, ಆಕ್ಸಿಜನ್ ರೆಗ್ಯುಲೇಟರ್ , ಪಿಪಿಇ ಕಿಟ್ ಗಳನ್ನು ಹೊರೆಗೆಸೆದು ದಾಂಧಲೆ ನಡೆಸಿ ಕಳವು ನಡೆಸಿದ್ದಾರೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೊರೊನಾ ಸೋಂಕಿತರ ಸೇವೆಯಲ್ಲಿ 24 ಗಂಟೆಗಳ ಕಾಲ ಜಿಲ್ಲೆಯಾದ್ಯಂತ ಶ್ರೀ ಗಣೇಶ್ ಆಂಬ್ಯುಲೆನ್ಸ್ ತೊಡಗಿಸಿಕೊಂಡಿದೆ.

ಜಿಲ್ಲೆಯ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತರಾದ ಬಹುತೇಕರ ಅಂತಿಮ ಸಂಸ್ಕಾರವನ್ನು ಶ್ರೀ ಗಣೇಶ್ ಆಂಬ್ಯುಲೆನ್ಸ್ ಮುಖೇನವೇ ನಡೆಸುತ್ತಾ ಬಂದಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಜನರ ಸೇವೆಯಲ್ಲಿ ತೊಡಗಿಸಿಕೊಂಡಿರುವ ವಾಹನಕ್ಕೆ ಇಂತಹ ದುಷ್ಕೃತ್ಯ ಎಸಗುವವರು, ಸಾಮಾನ್ಯ ವಾಹನ ಸವಾರರನ್ನು ಬಿಡಲು ಸಾಧ್ಯವಿಲ್ಲ ಎಂದು ಗಂಗಾಧರ್ ಅವರ ಪುತ್ರ ಪಚ್ಚು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ .

Leave a Reply

Your email address will not be published. Required fields are marked *