ಆಡಿಯೋದಲ್ಲಿರುವ ದ್ವನಿ ನನ್ನದಲ್ಲ ,ಇದರ ಬಗ್ಗೆ ಸಮಗ್ರ ತನಿಖೆಯಾಗಲಿ ಸಿ ಎಂ ರನ್ನು ಬೇಟಿಯಾಗುತ್ತೇನೆ: ಬಿ ಜೆ ಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸ್ಪಷ್ಟನೆ

ಮಂಗಳೂರು: ಸ್ಫೋಟಕ ಆಡಿಯೋ ಬಹಿರಂಗಗೊಂಡ ಬಗ್ಗೆ ನಳೀನ್ ಕುಮಾರ್ ಕಟೀಲ್ ಸ್ಪಷ್ಟನೆ ನೀಡಿದ್ದು. ಆಡಿಯೋದಲ್ಲಿರುವ ದ್ವನಿ ನನ್ನದಲ್ಲ ,ಇದರ ಬಗ್ಗೆ ಸಮಗ್ರ ತನಿಖೆಯಾಗಲಿ ಸಿ ಎಂ ರನ್ನು ಬೇಟಿಯಾಗುತ್ತೇನೆ, ಈ ಹಿಂದೆ ಸಿ ಎಂ ಬಿ ಎಸ್ ಯಡಿಯೂರಪ್ಪ ರವರ ಆಡಿಯೊ ಕೂಡ ತಿರುಚಿ ವೈರಲ್ ಮಾಡಲಾಗಿತ್ತು ಎಂದೂ ತಿಳಿಸಿದರು.

ಅಡಿಯೋದಲ್ಲಿ ಏನಿತ್ತು? ಸಿ ಎಂ ಹುದ್ದೆಯಿಂದ ಯಡಿಯೂರಪ್ಪ ಕೆಳಗಿಳಿಯುವುದು ನಿಶ್ಚಿತವಾಗಿದ್ದು ಹಿರಿಯ ನಾಯಕರಾದ ಜಗದೀಶ್‌ ಶೆಟ್ಟರ್‌,ಈಶ್ವರಪ್ಪ ಗ್ಯಾಂಗು ಸಂಪುಟದಿಂದ ಖಾಯಂ ಆಗಿ ಹೊರಬೀಳಲಿದೆ.ಈ ಸ್ಪೋಟಕ ಸಂಗತಿ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಆಡಿಯೋ ದಿಂದ ಬಹಿರಂಗವಾಗಿದ್ದು ತಮ್ಮ ಆಪ್ತರ ಜೊತೆ ಮಾತುಕತೆ ನಡೆಸಿರುವ ನಳೀನ್‌ ಕುಮಾರ್‌ ಕಟೀಲ್‌ ಅವರ ಆಡಿಯೋ ಈ ಸಂಗತಿಯನ್ನು ಬಹಿರಂಗಪಡಿಸಿರುವ ರೀತಿ ಯಡಿಯೂರಪ್ಪ ಅವರ ಪದಚ್ಯುತಿಯ ಸುಳಿವು ನೀಡಿದೆಯಲ್ಲದೆ ಸಧ್ಯದಲ್ಲೇ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಬರಲಿದ್ದಾರೆ ಎಂಬ ಆಡಿಯೋ ತಾರಾಪ್ರಭ ಮೀಡಿಯಾ ಹೌಸ್‌ ಗೆ ಲಭ್ಯವಾಗಿದ್ದು,ಯಡಿಯೂರಪ್ಪ ಅವರ ಜಾಗಕ್ಕೆ ಮೂವರ ಪೈಕಿ ಒಬ್ಬರು ಬರಲಿದ್ದಾರೆ ಎಂದು ನಳೀನ್‌ ಕುಮಾರ್‌ ಕಟೀಲ್‌ ಸುಳಿವು ನೀಡಿದ್ದಾರೆ.ತಮ್ಮ ಆಪ್ತರ ಬಳಿ ಕಟೀಲ್‌ ಅವರು ತುಳುವಿನಲ್ಲಿ ಮಾತನಾಡಿದ್ದು:ಯಾರಿಗೂ ಹೇಳಬೇಡ.ಶೆಟ್ಟರ್‌,ಈಶ್ವರಪ್ಪ ಮತ್ತವರ ಟೀಮು ಹೊರಬೀಳಲಿದ್ದು ಆನಂತರ ನಾವು ಹೇಳಿದಂತೆಯೇ ನಡೆಯಲಿದೆ.ಯಾರೇ ಬಂದರೂ ನಮಗೆ ಬೇಕಾದವರೇ ಆಗಿರಲಿದ್ದು ಮೂರು ಜನರ ಹೆಸರು ಹೈಕಮಾಂಡ್‌ ಗಮನದಲ್ಲಿದೆ ಎಂದಿರುವ ಆಡಿಯೊ ಬಹಿರಂಗವಾಗಿತ್ತು .

Leave a Reply

Your email address will not be published. Required fields are marked *