ಬಿರುವೆರ್ ಕುಡ್ಲದಿಂದ ಹೈಟೆಕ್ ಅಂಬ್ಯುಲೆನ್ಸ್ ಲೋಕಾರ್ಪಣೆ


ಮಂಗಳೂರು: ಸಮಾಜಸೇವೆ ಮಾಡುತ್ತಿರುವ ಫ್ರೆಂಡ್ಸ್ ಬಳ್ಳಾಲ್ ಭಾಗ್ ಬಿರುವೆರ್ ಕುಡ್ಲ ಸಂಘಟನೆಯಿಂದ ಕೊರೊನಾ ಈ ಸಂಕಷ್ಟದ ಸಮಯದಲ್ಲಿ ಸಾರ್ವಜನಿಕರಿಗೆ ತುರ್ತು ಉಪಯೋಗದ ನಿಟ್ಟಿನಲ್ಲಿ ಉಚಿತ ಸುಸಜ್ಜಿತ ಆಕ್ಸಿಜನ್ ಒಳಗೊಂಡ, ೨೨ಲಕ್ಷ ರುಪಾಯಿ ವೆಚ್ಚದ ಹೈಟೆಕ್ ಅಂಬ್ಯುಲೆನ್ಸ್ ಸೇವೆಯನ್ನು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಲೋಕಾರ್ಪಣೆಗೊಳಿಸಿದರು.


ಈ ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣದ ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ಉತ್ತರದ ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಫ್ರೆಂಡ್ಸ್ ಬಳ್ಳಾಲ್ ಭಾಗ್ ಬಿರುವೆರ್ ಕುಡ್ಲ ಸ್ಥಾಪಕ ಅಧ್ಯಕ್ಷರಾದ ಉದಯ್ ಪೂಜಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಫ್ರೆಂಡ್ಸ್ ಬಳ್ಳಾಲ್ ಭಾಗ್ ಬಿರುವೆರ್ ಕುಡ್ಲ ಸದಸ್ಯರು ಹಾಜರಿದ್ದರು.
ಉಚಿತ ಅಂಬ್ಯುಲೆನ್ಸ್‌ಗಾಗಿ ಸಂಪರ್ಕಿಸಿ: 8277086334, 8310197377

Leave a Reply

Your email address will not be published. Required fields are marked *