ಮೊಬೈಲಿನಲ್ಲಿ ಮಾತನಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಮನೆ ಬಿಟ್ಟ ಬಾಲಕಿ

ಕೊಣಾಜೆ : ಹೆಚ್ಚಾಗಿ ಮೊಬೈಲಿನಲ್ಲಿ ಮಾತನಾಡುತ್ತಿರುವುದನ್ನು ತಾಯಿ ಪ್ರಶ್ನಿಸಿದಕ್ಕೆ ಬಾಲಕಿಯೋರ್ವಳು ಮನೆ ಬಿಟ್ಟು ನಾಪತ್ತೆಯಾಗಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಪುಣಿಯಲ್ಲಿ ನಡೆದಿದೆ. ಈ ಕುರಿತು ತಾಯಿ ಮೀನಾಕ್ಷಿ ಕೊಣಾಜೆ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಜು.6 ರಂದು ಮೀನಾಕ್ಷಿ ಅವರು ಮುಡಿಪು ಪೇಟೆಗೆ ಮಗನ ಜೊತೆಗೆ ಬೆಳಿಗ್ಗೆ 7.30 ರ ಸುಮಾರಿಗೆ ತೆರಳಿದ್ದರು. ಈ ವೇಳೆ ಬಾಳೆಪುಣಿ ಗ್ರಾಮದ ಕುಕ್ಕುದಕಟ್ಟೆ ಸೈಟ್ ನಲ್ಲಿದ್ದ ಕುಮಾರಿ ದೀಕ್ಷಾ (18) ಒಬ್ಬಳೇ ಮನೆಯಲ್ಲಿದ್ದವಳು ನಾಪತ್ತೆಯಾಗಿದ್ದಾಳೆ. ದೀಕ್ಷಾ ಹೆಚ್ಚಾಗಿ ಮೊಬೈಲಿನಲ್ಲಿ ಮಾತನಾಡುತ್ತಿದ್ದುದನ್ನು ತಾಯಿ ಪ್ರಶ್ನಿಸಿದ್ದರು. ಇದೇ ಕಾರಣವನ್ನು ಮುಂದಿಟ್ಟುಕೊಂಡು ಬಾಲಕಿ ನಾಪತ್ತೆಯಾಗಿರುವ ಸಾಧ್ಯತೆ ಇದೆ ಎಂದು ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *