ಪರ್ಯಾಯ ನಾಯಕತ್ವದ ಮುಖ ಸುಹೈಲ್ ಕಂದಕ್

ಖಾಸಗಿ ಆಸ್ಪತ್ರೆಗಳ ಬಿಲ್ ಮೇಲೆ ಕಡಿವಾಣ ಹಾಕಿದೆಯೇ ಸುಹೈಲ್ ಪ್ರಕರಣ?
ಮಂಗಳೂರು: ಕೊರೊನಾ ಚಿಕಿತ್ಸೆ ನೀಡಿದ ಆಸ್ಪತ್ರೆಗಳ ಬಿಲ್‍ಗಳನ್ನು ಪರಿಶೀಲಿಸುವುದಕ್ಕಾಗಿ ಆಡಿಟ್ ತಂಡ ರಚಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ನೀಡಿದ ಮಾಹಿತಿಯಂತೆ ಈ ತಂಡವು ತಂಡ ಕಾರ್ಯಾಚರಣೆಗೆ ಇಳಿಯುವುದು ಯಾವಾಗ ಎಂಬ ಪ್ರಶ್ನೆ ಎದ್ದಿದೆ.
ಸರಕಾರದ ಸೂಚನೆಗಳಡಿಯಲ್ಲಿ ಚಿಕಿತ್ಸೆ ನೀಡಲಾಗಿದೆಯೇ ಅಥವಾ ಬೇಕಾಬಿಟ್ಟಿ ಬಿಲ್ ಮಾಡಲಾಗುತ್ತಿದೆಯೇ ಎಂಬುದನ್ನು ಜಿಲ್ಲಾಧಿಕಾರಿ ನೇಮಿಸಿದ ತಂಡ ವಿವಿಧ ಆಸ್ಪತ್ರೆಗಳಿಗೆ ತೆರಳಿ ಪರಿಶೀಲನೆ ನಡೆಸಲಿದೆ. ಪ್ರಾರಂಭದಲ್ಲಿ ಆಯುಷ್ಮಾನ್ ಭಾರತ್, ಆರೋಗ್ಯ ವಿಮೆ ಮೂಲಕ ಚಿಕಿತ್ಸೆ ಪಡೆದವರಿಗಿಂತಲೂ ಹಣ ಪಾವತಿಸಿದ ರೋಗಿಗಳ ಬಿಲ್‍ಗೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಅದರೆ ಪರಶಿಲನೆ ಆರಂಭವಾಗಿದೆಯೇ ಎಂಬ ವಿಷಯ ಇನ್ನೂ ಹೊರಗ ಬಿದ್ದಲ್ಲ.
ಕೊರೊನಾ ವಾರಿಯರ್ ಆಗಿ ಸೇವೆಯಲ್ಲಿರುವ ಕಾಂಗ್ರೆಸ್ ನಾಯಕ ಸುಹೈಲ್ ಕಂದಕ್ ಸಹಿತ ಅನೇಕ ಸಾಮಾಜಿಕ ಕಾರ್ಯಕರ್ತರು ಖಾಸಗಿ ಆಸ್ಪತ್ರೆಗಳ ಲೂಟಿಯ ವಿರುದ್ಧ ಧ್ವನಿ ಎತ್ತಿದ್ದರ ಪರಣಾಮ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಜಿಲ್ಲಾಧಿಕಾರಿ ಹೇಳಿಕೆ ಕೊಟ್ಟ ಬಳಿಕವೂ ಪರಿಶೀಲನೆ ಕಾರ್ಯ ಎಲ್ಲಿಗೆ ಬಂದಿದೆ ಎಂಬ ಮಾಹಿತಿ ಇಲ್ಲ.

ಖಾಸಗಿ ಆಸ್ಪತ್ರೆಗಳ ಬಿಲ್ ವಿಷಯದಲ್ಲಿ ಹಿಂದೆಯೂ ಸಮಸ್ಯೆ ಇತ್ತಾದರೂ ಇಂಡಿಯಾನಾ ಆಸ್ಪತ್ರೆಯ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಸುಹೈಲ್ ಕಂದಕ್‍ರನ್ನು ಬಂಧಿಸಿದ ಬಳಿಕ ವಿಷಯ ಗಂಭೀರ ಸ್ವರೂಪ ಪಡೆಯಿತು ಎನ್ನಬಹುದು.
ಪೊಲೀಸರನ್ನು ದೂರದಿರಿ: ಸುಹೈಲ್ ಕಂದಕ್ ಬಂಧನ ಮತ್ತು ಬಿಡುಗಡೆಯ ವಿಷಯದಲ್ಲಿ ಪ್ರತಿಕ್ರಿಯೆ ನೀಡಿರುವ ಮಂಗಳೂರು ಪೊಲೀಸ ಆಯುಕ್ತ ಎನ್.ಶಶಿಕುಮಾರ್, ಇಂಡಿಯಾನಾ ಪ್ರಕರಣದಲ್ಲಿ ಪೊಲೀಸರನ್ನುದೂರುವುದು ಸರಿಯಲ್ಲ ಆಸ್ಪತ್ರೆಯ ಕಡೆಯವವರಿಂದಲೇ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರ ಕ್ರಮಕ್ಕೆ ಮುಂದಾಗಬೇಕಾಗಿ ಬಂದಿತ್ತು ಎಂದು ತಿಳಿಸಿದ್ದರು. ಸುಹೈಲ್ ಕಂದಕ್‍ರನ್ನು ವಶಕ್ಕೆ ಪಡೆದಿದ್ದ ಪೊಲೀಸರು ಇಂಡಿಯಾನಾ ಅಸ್ಪತ್ರೆಯವರೇ ದೂರು ಹಿಂಪಡೆದ ಬಳಿಕ ಬಿಟ್ಟಿದ್ದರು.
ಈ ಘಟನೆ ಎರಡು ವಿಷಯವನ್ನು ಮೇಲ್ಪಂಕ್ತಿಗೆ ತಂದಿತು. ಒಂದು ಆಸ್ಪತ್ರೆಗಳ ಮೇಲೆ ಕಡಿವಾಣ ಹಾಕಲು ಜಿಲ್ಲಾಡಳಿತ ಕೈಗೊಂಡ ಕ್ರಮವಾಗಿದ್ದರೆ, ಇನ್ನೊಂದು ಸುಹೈಲ್ ಕಂದಕ್ ವಿಷಯದಲ್ಲಿ ಹುಟ್ಟಿಕೊಂಡ ಕುತೂಹಲ. ತರೆಯ ಮರೆಯಲ್ಲಿ ತನ್ನಷ್ಟಕ್ಕೆ ತಾನು ಕೆಲಸ ಮಾಡಿಕೊಂಡಿದ್ದ ಸುಹೈಲ್ ಕಂದಕ್ ಬಗ್ಗೆ ತಿಳಿಯಲು ಜನರು ಆಸಕ್ತಿ ತಾಳಿದರು.

ಪರ್ಯಾಯ ನಾಯಕತ್ವದ ಮುಖ ಸುಹೈಲ್ ಕಂದಕ್
ದ.ಕ. ಜಿಲ್ಲೆಯ ಕಾಂಗ್ರೆಸ್‍ನಲ್ಲಿ ಎರಡನೆ ಸಾಲಿನ ನಾಯಕರಿಲ್ಲ ಎಂಬ ಅಪವಾದ ಇದೆ. ಇದಕ್ಕೆ ಉತ್ತರವಾಗಿ ಮಿಥುನ್ ರೈಯಂತಹ ನಾಯಕರು ಕಾಣುತ್ತಿದ್ದಾರೆ. ಈಗ ಅದೇ ದಾರಿಯಲ್ಲಿಯ ನಾಯಕನಾಗಿ ನಮಗೆ ಕಾಣುತ್ತಿರುವುದು ಸುಹೈಲ್ ಕಂದಕ್. ಯು.ಟಿ.ಖಾದರ್ ಬಳಿಕದ ಪ್ರಭಾವಿ ಮುಸ್ಲಿಮ್ ನಾಯಕರ ಸ್ಥಾನದಲ್ಲೂ ಸುಹೈಲ್ ವಿರಾಜಮಾನರಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಪ್ರಭಾವಿ ನಾಯಕರ ಹಿಂದೆ ಸುತ್ತಾಡಿ ನಾನೂ ನಾಯಕ ಎಂದು ಬಿಂಬಿಸಿಕೊಳ್ಳುವವರು ಹಲವರಿದ್ದಾರೆ. ಇಂತಹವರ ಮಧ್ಯ ಪ್ರಭಾವಿತರ ಯಾವುದೇ ಪ್ರಭಾವಕ್ಕೂ ಒಳಗಾಗದೇಯೇ ತನ್ನ ದೃಢತೆ ಹಾಗೂ ಸೇವಾ ಕಾರ್ಯಗಳಿಂದಾಗಿಯೇ ನಾಯಕನಾಗಿ ಬೆಳೆಯುತ್ತಿರುವವರು ಸುಹೈಲ್ ಕಂದಕ್. ಕೊರೊನಾ ಕಾಲದಲ್ಲಿ ಸುಹೈಲ್ ಕಂದಕ್ ಮಾಡಿದ ಸೇವೆ ಈಗ ಎಲ್ಲರ ಗಮನ ಸೆಳೆದಿದೆ. ಯಾವ ಪ್ರಚಾರಕ್ಕೂ ಗಮನ ಕೊಡದೆ ತನ್ನಷ್ಟಕ್ಕೆ ತಾನು ಕೋವಿಡ್ ಸೋಂಕಿತರಿಗೆ ಸೇವೆ, ಕೋವಿಡ್‍ನಿಂದ ಮೃತ ಪಟ್ಟವರ ಅಂತ್ಯ ಸಂಸ್ಕಾರ ಮಾಡುತ್ತಲೇ ಲಾಕ್‍ಡೌನ್‍ನಿಂದ ಸಂತ್ರಸ್ತರಾದ ಬಡವರಿಗೆ ಮತ್ತು ನಿರ್ಗತಕರಿಗೆ ಆಹಾರ ಒದಗಿಸುವ ಕೆಲಸವನ್ನು ಲಾಕ್‍ಡೌನ್ ಘೋಷಿಸಿದ ಮೊದಲ ದಿನದಿಂದಲೇ ಮಾಡಿಕೊಂಡು ಬಂದಿದ್ದಾರೆ ಸುಹೈಲ್ ಕಂದಕ್. ಇವರು ವಾರಗಟ್ಟಲೇ ಮನೆಗೆ ಹೋಗದಿರುವುದೂ ಇದೆ ಎಂಬುದನ್ನು ಹೇಳಿದರೆ ಅವರ ಸೇವಾ ತತ್ಪರತೆ ಅರ್ಥವಾಗುತ್ತದೆ. ರಮಝಾನ್ ಮಾಸದಲ್ಲಿ ಸುಹೈಲ್‍ರ ಗೆಳೆಯರ ಬಳಗದವರು ಉಪವಾಸವಿದ್ದೂ ಕೂಡ ದಿನಕ್ಕೆ ಏಳು ಎಂಟು ಮೃತದೇಹಗಳ ಸಾಗಾಟ ಮತ್ತು ಅವರವರ ಧರ್ಮಕ್ಕನುಗುಣವಾದ ಅಂತ್ಯ ಸಂಸ್ಕಾರ ಮಾಡುತ್ತಿದ್ದರು.

ಸುಹೈಲ್ ತಾನು ಮಾಡುತ್ತಿರುವ ಸೇವಾ ಕಾರ್ಯಗಳಿಗೆ ಯಾವತ್ತೂ ಪ್ರಚಾರ ಬಯಸಿದವರಲ್ಲ. ಆದರೆ ಸೇವೆಯ ಕಾರಣದಿಂದಾಗಿ ಹುಟ್ಟಿಕೊಂಡ ಕೆಲವು ವಿವಾದಗಳು ಅವರ ಸೇವೆಯನ್ನು ಜಗತ್ತಿಗೆ ಪರಿಚಯಿಸುವಂತೆ ಮಾಡಿದವು. ಖಾಸಗಿ ಆಸ್ಪತ್ರೆಗಳವರು ಮಾಡುತ್ತಿರುವ ಸುಲಿಗೆಯನ್ನು ವಿರೋಧಿಸಿದ ಮತ್ತು ಖಾಸಗಿ ಆಸ್ಪತ್ರೆಗಳ ಆಡಳಿತಗಾರರ ವಿರುದ್ಧ ಧರಣಿಯನ್ನೂ ನಡೆಸಿ ನಾಲ್ಕೈದು ಲಕ್ಷ ರೂ.ಗಳು ಇದ್ದ ಬಿಲ್‍ನ್ನು ಒಂದು ಲಕ್ಷ ರೂ. ಆಸುಪಾಸಿಗೆ ಇಳಿಸುವಲ್ಲಿ ಶ್ರಮಿಸಿದ್ದೂ ಇದೆ. ಇವರ ಇಂತಹದ್ದೇ ಶ್ರಮ ಅವರು ಪೊಲೀಸ್ ಕೇಸ್ ಎದುರಿಸುವಂತೆಯೂ ಮಾಡಿತ್ತು. ಈ ಸಂದರ್ಭದಲ್ಲಿ ಸುಹೈಲ್ ಕಂದಕ್‍ರಿಗೆ ಪಕ್ಷಾತೀತವಾದ ಬೆಂಬಲ, ಧರ್ಮಾತೀತವಾದ ಸಾಂತ್ವನ ಸಿಕ್ಕತ್ತು. ಇದೇ ಸಾಕು, ಸುಹೈಲ್ ಹೇಗೆ ಎಂಬುದನ್ನು ಅರ್ಥ ಮಾಡಿಕೊಳ್ಳಲು.
ಸುಹೈಲ್ ಧರ್ಮ ಜಾತಿ ನೋಡದೆ ಸೇವಾ ಕಾರ್ಯದಲ್ಲಿದ್ದಾರೆ. ಇದು ಒಂದು ರೀತಿಯಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದವರ ಕಣ್ಣು ಕೆಂಪಗಾಗಿಸಿದ್ದೂ ಇದೆ. ಅವರ ಪ್ರಭಾವ ತಡೆಯಲು ಪರೋಕ್ಷ ಪ್ರಯತ್ನ ಕೂಡ ನಡೆದಿದೆ ಎಂಬುದು ಮರೆಮಾಚಲಾಗದ ಸಂಗತಿ.
ಬೆಳೆಯ ಸಿರಿ ಮೊಳಕೆಯಲ್ಲಿ ಎಂಬಂತೆ ಸುಹೈಲ್ ಕಂದಕ್ ಕಾಂಗ್ರೆಸ್‍ನ ಪ್ರಭಾವಿ ನಾಯಕನಾಗಿ ಬೆಳೆಯವ ಲಕ್ಷಣಗಳು ಗೋಚರಿಸುತ್ತಿವೆ.