ಜನ ಮನ ಗೆದ್ದ ತುಳುಕೂಟ ಕತಾರ್ ಸಾದರಪಡಿಸಿದ “ನಮ ಗೆಂದುವ” (ನಾವು ಗೆಲ್ಲುವೆವು)ದೃಶ್ಯಾವಳಿ

ಕತಾರ್: ಕೋರೋಣ ಮಹಾಮಾರಿಯು ಜಗತ್ತಿನಾದ್ಯಂತ ಬಹಳ ವಿನಾಶಕಾರಿಯಾಗಿ ಅಟ್ಟಹಾಸಗೈಯುತ್ತಿರುವ ಸಂದರ್ಭದಲ್ಲಿ ತುಳುಕೂಟ ಕತಾರ್ ನ “ನಮ ಗೆಂದುವ” (ನಾವು ಗೆಲ್ಲುವೆವು) ಎನ್ನುವ ದೃಶ್ಯಾವಳಿಯು ಜನ ಮನ ಗೆದ್ದಿದೆ . ಸಂಘದ 150ಕ್ಕೂ ಅಧಿಕ ಉತ್ಸಾಹಿತ ಹಾಗೂ ಸ್ವಯಂಪ್ರೇರಿತ ಸದಸ್ಯರು ಕಾಣಿಸಿಕೊಂಡಿದ್ದ ಈ ದೃಶ್ಯಾವಳಿಯು ಸಮುದಾಯದಲ್ಲಿ ಆಶಾವಾದವನ್ನು ಮೂಡಿಸುವುದರ ಜೊತೆಗೆ ಒಂದು ತುಂಬಿದ ಪರಿವಾರದೊಳಗಿನ ಹಬ್ಬದ ಸಡಗರದ ವಾತಾವರಣ ಕಂಡು ಬಂತು.ತುಳು, ಕನ್ನಡ ಹಾಗೂ ಹಿಂದಿ ಹಾಡುಗಳನ್ನು ಒಳಗೊಂಡ 10 ನಿಮಿಷಗಳ ಈ ಪ್ರಸ್ತುತಿಯು ಸದಸ್ಯರಲ್ಲಿರುವ ಕ್ರಿಯಾಶೀಲತೆ ಹಾಗೂ ಉತ್ಸಾಹವನ್ನು ಬಿಂಬಿಸಿದರೆ ಇದಕ್ಕಾಗಿ ವ್ಯವಸ್ಥಾಪಕ ಸಮಿತಿ ವಹಿಸಿದ ಶ್ರಮವಂತೂ ನಿಜಕ್ಕೂ ಶ್ಲಾಘನೀಯ.ಸಮಾಜದಲ್ಲಿ ಧೈರ್ಯ, ನೆಮ್ಮದಿ ಹಾಗೂ ಸಂತಸವನ್ನು ಪಸರಿಸುವ ಸಲುವಾಗಿ ವಯೋಮಿತಿಯಿಲ್ಲದೆ ಎಲ್ಲರನ್ನೂ ಒಗ್ಗೂಡಿಸಿದ್ದೇ ಈ ಕಾರ್ಯಕ್ರಮದ ವಿಶೇಷತೆ .ಕೋವಿಡ್ ಪಿಡುಗಿನ ಈ ಸಂದರ್ಭದಲ್ಲೂ ಯಾವುದೇ ತಾರತಮ್ಯವಿಲ್ಲದೆ ಪ್ರತಿಯೊಬ್ಬರಿಗೂ ಅತ್ಯುತ್ತಮ ವೈದ್ಯಕೀಯ ಸೌಲಭ್ಯವನ್ನು ಕರುಣಿಸುವಲ್ಲಿ ಯಶಸ್ವಿಯಾದ ಕತಾರ್ ದೇಶಕ್ಕೆ ತುಳುಕೂಟ ಕತಾರ್ ಹಾಗೂ ಸಂಘದ ಸದಸ್ಯರು ಅಭಿನಂದನೆ ಸಲ್ಲಿಸಿದರು.

Leave a Reply

Your email address will not be published. Required fields are marked *