ಸಿನಿಮಾ ನಿರ್ದೇಶಕ ರಘು ಶೆಟ್ಟಿ ನಿಧನ

ಮಂಗಳೂರು: ಪ್ರತಿಭಾವಂತ ತುಳು ಸಿನಿಮಾ ನಿರ್ದೇಶಕ ರಘು ಶೆಟ್ಟಿ ಹೃದಯಾಘಾತದಿಂದ ಇಂದು ಸಂಜೆ ನಿಧನರಾದರು. ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ರಘು ಶೆಟ್ಟಿ ಅವರು ತುಳುವಿನ ‘ಅರ್ಜುನ್ ವೆಡ್ಸ್ ಅಮೃತ ಚಿತ್ರವನ್ನು ನಿರ್ದೇಶಿಸಿ ಅಸಂಖ್ಯಾತ ಸಿನಿಮಾ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಸದ್ಯ ಕನ್ನಡ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದರು. ಆದರೆ ಅಷ್ಟರಲ್ಲಾಗಲೇ ಅವರು ನಿಧನರಾಗಿದ್ದಾರೆ.
ತುಳು ಚಿತ್ರರಂಗದ ಪ್ರತಿಭಾವಂತ ನಿರ್ದೇಶಕರಾಗಿ ಇನ್ನಷ್ಟು ಸಿನಿಮಾಗಳನ್ನು ತೆರೆಗೆ ತರುವ ಉತ್ಸಾಹದಲ್ಲಿದ್ದ ರಘು ಶೆಟ್ಟಿಯವರ ಅಕಾಲಿಕ ನಿಧನಕ್ಕೆ ಕೋಸ್ಟಲ್ವುಡ್ ಕಂಬನಿ ಮಿಡಿದಿದೆ.