ಸಂತ ಲಾರೆನ್ಸ್ ಚರ್ಚ್ ಬೋಂದೆಲ್ ನಲ್ಲಿ ಯೇಸುವಿನ ಪುನಾರುತ್ಥಾನದ ಆಚರಣೆ

ಮಂಗಳೂರು : ಸಂತ ಲಾರೆನ್ಸ್ ಚರ್ಚ್ ಬೊಂದೆಲ್‍ನಲ್ಲಿ ಯೇಸುವಿನ ಪುನಾರುತ್ಥಾನದ (ಈಸ್ಟರ್) ಆಚರಣೆಯ ಬಲಿಪೂಜೆಯನ್ನು , ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಇದರ ಆಡಳಿತಾಧಿಕಾರಿ ಅ| ವಂ| ಗುರು ರೋಹಿತ್ ಡಿಕೋಸ್ತಾರವರು (ವಾಮಂಜೂರ್) ಆರ್ಪಿಸಿ ಪ್ರಭೋದನೆ ನೀಡಿದರು. ಅ| ವಂ| ಗುರು ಆ್ಯಂಡ್ರೂ ಲಿಯೊ ಡಿಸೋಜಾ, ವಂ| ಗುರು ರೂಪೇಶ್ ತಾವ್ರೊ, ವಂ| ಗುರು ಕ್ಲಿಫರ್ಡ್ ಪಿಂಟೊ ಹಾಗೂ ಇನ್ನಿತರ ಧರ್ಮಗುರುಗಳು, ಧರ್ಮ ಭಗಿನಿಯರು, ಕ್ರೈಸ್ತ ಭಕ್ತಾದಿಗಳು ಈ ಬಲಿಪೂಜೆಯಲ್ಲಿ ಪಾಲ್ಗೊಂಡರು. ಪ್ರತಿದಿನ ಕೋವಿಡ್-19 ಹಾಗೂ ಕಾಯಿಲೆ ಹಾಗೂ ವಿವಿಧ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಹಾಗೂ ಸಮಾಜ ಸೇವೆ ನೀಡುವ ಪ್ರತಿಯೊಬ್ಬರಿಗೂ ವಿಶೇಷ ಪ್ರಾರ್ಥನೆ ನೇರವೆರಿಸಲಾಯಿತು.

Leave a Reply

Your email address will not be published. Required fields are marked *