“ಪ್ರಭಾಕರ ಭಟ್ಟರ ಧರ್ಮದವರು ಗೋವನ್ನು ತಿನ್ನುವುದಿಲ್ಲವೇ?” -ಬಾವಾ ಕಿಡಿ


ಮಂಗಳೂರು: “ಬಜ್ಪೆ ಸಮೀಪದ ಕೆಂಜಾರ್ ನಲ್ಲಿರುವ ಕಪಿಲಾ ಗೋವು ಆಶ್ರಯವನ್ನು ಜಿಲ್ಲಾಡಳಿತ ತೆಗೆದುಹಾಕಿ 15 ದಿನಗಳು ಕಳೆದರೂ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ಅಲ್ಲಿ ಭೇಟಿ ಕೊಟ್ಟು ಗೋವುಗಳು ರಾತ್ರಿ ವೇಳೆ ಚಳಿಗೆ ಬಯಲಲ್ಲಿ ಮಲಗುತ್ತಿರುವುದನ್ನು ಕಂಡಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಿಜೆಪಿ ಆಳ್ವಿಕೆಯಲ್ಲಿವೆ. ಸಿದ್ದರಾಮಯ್ಯ ಸರಕಾರ ಆಡಳಿತ ಇರುವಾಗ ಕೋಸ್ಟ್ ಗಾರ್ಡ್ ಇಲಾಖೆಯ ನಿವೇಶನ ಪಕ್ಕದಲ್ಲಿ 30 ಸೆಂಟ್ಸ್ ಜಾಗವನ್ನು ಗೋವು ಆಶ್ರಮಕ್ಕೆ ಬಿಡಬೇಕು ಎಂದು ಹೇಳಲಾಗಿತ್ತು. ಹಲವಾರು ವರ್ಷಗಳಿಂದ ಅಲ್ಲೇ ಗೋವು ಸಾಕಣೆ ಮಾಡಲಾಗುತ್ತಿತ್ತು. ಪ್ರಕಾಶ್ ಶೆಟ್ಟಿ ಅವರು ಹಳೆಯ ತಳಿಗಳನ್ನು ಇಲ್ಲಿ ಪೋಷಣೆ ಮಾಡುತ್ತಿದ್ದರು. ಆದರೆ ಕೋಸ್ಟ್ ಗಾರ್ಡ್, ಜಿಲ್ಲಾಡಳಿತ, ಸಂಸದರು, ಸ್ಥಳೀಯ ಶಾಸಕರು ಸೇರಿ ತೀರ್ಮಾನ ಕೈಗೊಂಡು ಗೋವಿನ ಆಶ್ರಯವನ್ನು ಒಡೆದು ಹಾಕಿದ್ದಾರೆ. ಇದು ತೀರಾ ನೋವಿನ ಸಂಗತಿ. ಕರ್ನಾಟಕದಲ್ಲಿ ಬಿಜೆಪಿ ಸರಕಾರ ಗೋವಿನ ಹೆಸರಲ್ಲಿ ರಾಜಕೀಯ ಮಾಡುತ್ತಿದೆ. ನಾನು ಚುನಾವಣೆ ನಿಂತಿದ್ದ ವೇಳೆ ನನ್ನ ಬಗ್ಗೆ ಕ್ಷೇತ್ರದಲ್ಲಿ ಅಪಪ್ರಚಾರ ಮಾಡಿದ್ದು, “ಬ್ಯಾರಿಗೆ ವೋಟ್ ಕೊಟ್ಟರೆ ಕೊಟ್ಟಿಗೆಯಲ್ಲಿರುವ ಗೋವುಗಳು ಕಸಾಯಿಖಾನೆಗೆ ಹೋಗುತ್ತದೆ” ಎಂದಿದ್ದಾರೆ. ಹೀಗೆ ಗೋವಿನ ಹೆಸರಲ್ಲಿ ರಾಜಕೀಯ ಮಾಡಿ ಗೆದ್ದ ಬಳಿಕ ಗೋವನ್ನೇ ಮರೆತಿದ್ದಾರೆ” ಆರೆಸ್ಸೆಸ್ ನ ಪ್ರಭಾಕರ ಭಟ್ಟರು ಗೋವನ್ನು ಕಡಿಯುವವರ ಜೊತೆಗೆ ಸಾಕುವವರು ಸೇರಿದ್ದಾಗಿ ಲೇವಡಿ ಮಾಡಿದ್ದಾರೆ. ಹಾಗಾದರೆ ಭಟ್ಟರ ಧರ್ಮದವರು ಗೋವನ್ನು ತಿನ್ನುವುದಿಲ್ಲವೇ?” ಎಂದು ಮಾಜಿ ಶಾಸಕ ಮೊಯಿದೀನ್ ಬಾವಾ ಕಿಡಿಕಾರಿದ್ದಾರೆ. ಇದೇ ವೇಳೆ ತಮ್ಮ ವೈಯಕ್ತಿಕ ನೆಲೆಯಲ್ಲಿ 1 ಲಕ್ಷ ರೂ. ಅನ್ನು ಗೋಶಾಲೆಗೆ ನೀಡಿದರು. ಪ್ರಕಾಶ್ ಶೆಟ್ಟಿ, ದೀಪಕ್ ಪೆರ್ಮುದೆ ಉಪಸ್ಥಿತರಿದ್ದರು.