ಕೊಡುಗೈ ದಾನಿ ಹಿರಿಯ ಉದ್ಯಮಿ ಗಣೇಶ್ ಬಂಗೇರಾ ಇನ್ನಿಲ್ಲ


ಮಂಗಳೂರು: ನಗರದ ಯೆಯ್ಯಾಡಿ ಗುರುನಗರ ನಿವಾಸಿ ಹಿರಿಯ ಉದ್ಯಮಿ, ಜಿಬಿ ಕನ್ ಸ್ಟ್ರಕ್ಷನ್ಸ್ ಮಾಲಕ ಗಣೇಶ್ ಬಂಗೇರಾ(62) ಅವರು ಇಂದು ನಸುಕಿನ ಜಾವ ಸ್ವಗೃಹದಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಹತ್ತು ಹಲವಾರು ಧಾರ್ಮಿಕ ಸಂಘಟನೆಗಳಲ್ಲಿ ಅಹರ್ನಿಶಿ ದುಡಿದಿದ್ದ ಬಂಗೇರರು ಗೆಜ್ಜೆಗಿರಿ ಕ್ಷೇತ್ರವೂ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಕೊಡುಗೈ ದಾನಿಯಾಗಿ ಸಾಮಾಜಿಕ ಸಂಘಟನೆಗಳ ಮುಂದಾಳುವಾಗಿದ್ದ ಇವರು ಎಲ್ಲರೊಂದಿಗೆ ಸ್ನೇಹಪರ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದರು. ಅಲ್ಪಕಾಲದ ಅಸೌಖ್ಯಕ್ಕೆ ತುತ್ತಾಗಿದ್ದ ಅವರು ಇಂದು ನಸುಕಿನ ಜಾವ 2 ಗಂಟೆಗೆ ಹೃದಯಘಾತದಿಂದ ಮೃತರಾದರು. ಇಂದು ಬೆಳಗ್ಗೆ 11 ಗಂಟೆಗೆ ಮೃತರ ಅಂತ್ಯಸಂಸ್ಕಾರ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ಹೇಳಿವೆ.

Leave a Reply

Your email address will not be published. Required fields are marked *