ಹರೇಕಳ : ಮತ್ತೆ ರಾಜಕೀಯ ಹೊಡೆದಾಟ ಡಿವೈಎಫ್ ಐ ಬೆಂಬಲಿತ ಅಭ್ಯರ್ಥಿಗೆ ಹಲ್ಲೆ

ಉಳ್ಳಾಲ : ಎಸ್ ಡಿಪಿಐ ಕಾಂಗ್ರೆಸ್ ಮಾರಾಮಾರಿ ನಡೆದು ಎರಡು ದಿನಗಳಾಗುತ್ತಿದ್ದಂತೆ ಮತ್ತೆ ರಾಜಕೀಯ ಗುದ್ದಾಟ ಮುಂದುವರಿದಿದ್ದು, ಡಿವೈಎಫ್ ಐ ಬೆಂಬಲಿತ ಅಭ್ಯರ್ಥಿಗೆ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿ ಮರದ ಸೋಂಟೆಯಿಂದ ಹಲ್ಲೆ ನಡೆಸಿರುವ ಘಟನೆ ಮತ್ತೆ ಹರೇಕಳದಲ್ಲಿ ನಡೆದಿದೆ.
ಡಿವೈಎಫ್ ಐ ಬೆಂಬಲಿತ ಅಭ್ಯರ್ಥಿ ಇಕ್ಬಾಲ್ ಗೆ ಹಲ್ಲೆ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತನೆನ್ನಲಾದ ಮುನೀರ್ ಎಂಬವರಿಂದ ಹಲ್ಲೆ ನಡೆದಿದೆ.ಬದ್ರುದ್ದೀನ್ ಗೆ ಸೇರಿದ ಮರದ ಅಂಗಡಿಯಲ್ಲಿ ಮಾತಿನ ಚಕಮಕಿ ನಡೆದು, ಇಕ್ಬಾಲ್ ಮರ ಹಿಡಿದು ಹಲ್ಲೆಗೆ ಮುಂದಾದಾಗ ತಡೆದ ಮುನೀರ್ ಖುದ್ದು ಮರದ ಸೋಂಟೆಯಿಂದ ಇಕ್ಬಾಲ್ ತಲೆಗೆ ಬಡಿದಿದ್ದಾರೆ. ಎಸ್ ಡಿಪಿಐ- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು ಇತ್ತಂಡಗಳ ದೂರು ಠಾಣೆಯಲ್ಲಿದ್ದು, ಇದೀಗ ಕಾಂಗ್ರೆಸ್ – ಡಿವೈಎಫ್ ಐ ನಡುವೆ ಗಲಾಟೆ ನಡೆದು ಈ ಕುರಿತ ಪ್ರಕರಣಗಳು ಕೊಣಾಜೆ ಠಾಣೆಯ ಮೆಟ್ಟಿಲೇರಿದೆ. ಇತ್ತಂಡದವರು ದೇರಳಕಟ್ಟೆ ಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
