ದ್ವಿಚಕ್ರ ವಾಹನಗಳೆರಡರ ಮುಖಾಮುಖಿ :ಬೈಕ್ ಸವಾರ ದಾರುಣ ಸಾವು

ಉಳ್ಳಾಲ: ದ್ವಿಚಕ್ರ ವಾಹನಗಳೆರಡರ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚೆಂಬುಗುಡ್ಡೆ ಬಳಿ ಇಂದು ನಸುಕಿನ ಜಾವ ಸಂಭವಿಸಿದೆ.
ಸಂತೋಷನಗರ ನಿವಾಸಿ ಸಂದೇಶ್ ಕೆರೆಬೈಲ್ (38) ಸಾವನ್ನಪ್ಪಿದವರು. ಕೊಲ್ಯ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮನೆಗೆ ವಾಪಸ್ಸಾಗುವ ಸಂದರ್ಭ ನಸುಕು 3 ರ ಜಾವಕ್ಕೆ ಅಪಘಾತ ಸಂಭವಿಸಿದೆ. ತಲೆಗೆ ಗಂಭೀರ ಗಾಯಗೊಂಡ ಸಂದೇಶ್, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಅವಿವಾಹಿತರಾಗಿದ್ದು ಸಹೋದರಿ ಹಾಗೂ ತಾಯಿಯನ್ನು ಅಗಲಿದ್ದಾರೆ.ಪೈಂಟರ್ ಆಗಿ ದುಡಿಯುತ್ತಿದ್ದ ಸಂದೇಶ್, ಕೊರೊನಾ ಲಾಕ್ ಡೌನ್ ನಂತರ ಕೊಲ್ಯ ಸಮೀಪ ಮೀನು ಮಾರಾಟ ನಡೆಸುತ್ತಿದ್ದರು. ಮಂಗಳೂರಿನ ನಾಗುರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

