ಕಿನ್ನಿಗೋಳಿಯಲ್ಲಿ ಬೈಕ್ ಚಾಲಕನ ಮೇಲೆ ಹಲ್ಲೆ: ವೀಡಿಯೋ ವೈರಲ್

ಕಟೀಲು: ಕಿನ್ನಿಗೋಳಿ ಜಂಕ್ಷನ್ ಅಂಗಡಿಯೊಂದರ ಎದುರು ಬೈಕ್ ನಿಲ್ಲಿಸಿದ ಕಾರಣಕ್ಕಾಗಿ ಚಾಲಕನ ಮೇಲೆ ಸ್ಥಳೀಯ ನಿವಾಸಿಗಳಿಬ್ಬರು ಹಲ್ಲೆ ನಡೆಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಇದರಿಂದ ಕೆರಳಿದ ಸಾರ್ವಜನಿಕರು ಅಂಗಡಿ ಮುಂದೆ ಜಮಾಯಿಸಿ ಹಲ್ಲೆ ನಡೆಸಿದ್ದ ಸ್ಥಳೀಯರಿಬ್ಬರ ವಿರುದ್ದ ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದಾರೆ ಕಳೆದ ಅನೇಕ ಬಾರಿ ಇಂಥದೇ ಘಟನೆಗಳು ನಡೆದಿದ್ದು ಬೈಕ್ ಚಾಲಕರಿಗೆ ಹಲ್ಲೆ,ನಿಲ್ಲಿಸಿದ್ದ ಬೈಕ್ ಗಳ ಚಕ್ರಕ್ಕೆ ಹಾನಿಗೊಳಿಸುವುದು, ಹಲ್ಲೆಯತ್ನ ಘಟನೆಗಳು ನಡೆದಿದೆ ಎಂದು ಸಾರ್ವಜನಿಕರೊಬ್ಬರು ತಿಳಿಸಿದ್ದಾರೆ .ಈ ಜಾಗ ಸರ್ಕಾರಿ ಅಥವಾ ಖಾಸಗಿ ಜಾಗವೇ ಎಂದು ಸಂಬಂಧ ಪಟ್ಟ ಅಧಿಕಾರಿಗಳು ಪರಿಶೀಲಿಸಿ ಈ ತಕರಾರು ಸಮಸ್ಯೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.ಘಟನೆ ಸಂಬಂಧ ಮೂಲ್ಕಿ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
