ಲಂಚ ಪಡೆಯುತ್ತಿದ್ದಾಗಲೇ ಎಸಿಬಿ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ!

ಕುಂದಾಪುರ : ಅಧಿಕಾರಿಗಳ ಭ್ರಷ್ಟಾಚಾರ, ಲಂಚಾವತಾರಗಳ ಆಡಂಬೋಲವಾಗಿರುವ ಕುಂದಾಪುರದ ತಾಲೂಕು ಕಚೇರಿಯಲ್ಲಿ ಭೂ ಪರಿವರ್ತನೆಗೆ(ಕನ್ವರ್ಶನ್) ಕೇಳಿದ 12 ಸಾವಿರ ಲಂಚದ ಹಣದಲ್ಲಿ 5 ಸಾವಿರ ರೂ.ಪಡೆಯುವಾಗ ರೆವಿನ್ಯೂ ಇನ್ಸ್‌ಪೆಕ್ಟರ್ ಎಸಿಬಿ ಬಲೆಗೆ ಬಿದ್ದ ಘಟ‌ನೆ ಗುರುವಾರ ನಡೆದಿದೆ.ಎಸಿಬಿ ಬಲೆಗೆ ಸಿಕ್ಕಿ ಬಿದ್ದವರು ಕುಂದಾಪುರದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿದ್ದು ಪ್ರಸ್ತುತ ಕಂದಾಯ ನಿರೀಕ್ಷಕರಾಗಿರುವ ಭರತ್ ವಿ. ಶೆಟ್ಟಿ 5ಸಾವಿರ ಲಂಚ ಪಡೆಯುವಾಗ ಅವರದ್ದೇ ಸರಕಾರಿ ಕಚೇರಿಯಲ್ಲಿ ಎಸಿಬಿ ತಂಡಕ್ಕೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಧಿಕಾರಿಯಾಗಿದ್ದಾರೆ ವ್ಯಕ್ತಿಯೊಬ್ಬರ ಬಳಿ ಭೂಪರಿವರ್ತೆನೆಗೆ 12 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದು ಈ ಬಗ್ಗೆ ವ್ಯಕ್ತಿ ಎಸಿಬಿಗೆ ದೂರು ನೀಡಿದ್ದರು. ಅದರಂತೆಯೇ ಎಸಿಬಿ ಕಾರ್ಯಾಚರಣೆ ನಡೆಸಿದ್ದು ಇಂದು ವ್ಯಕ್ತಿ ಬಳಿ 5 ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಸದ್ಯ ಭರತ್ ಶೆಟ್ಟಿ ವಿಚಾರಣೆ ನಡೆಸುತ್ತಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ. ಎಸಿಬಿ ಉಡುಪಿ ಡಿವೈಎಸ್ಪಿ ಮಂಜುನಾಥ ಕವರಿ, ಇನ್ಸ್‌ಪೆಕ್ಟರ್ ಸತೀಶ್ ಬಿ.ಎಸ್., ಚಂದ್ರಕಲಾ, ಎಸಿಬಿ ಸಿಬ್ಬಂದಿಗಳಾದ ಯತೀನ್ ಕುಮಾರ್, ಪ್ರಸನ್ನ, ರವೀಂದ್ರ ಗಾಣಿಗ, ಅಬ್ದುಲ್ ಜಲಲ್, ರಾಘವೇಂದ್ರ ಹೊಸ್ಕೋಟೆ,ಸೂರಜ್, ಅಬ್ದುಲ್ ಲತೀಪ್, ಪ್ರತೀಮಾ ಮೊದಲಾದವರು ಈ ಕಾರ್ಯಾಚರಣೆಯಲ್ಲಿದ್ದರು.

Leave a Reply

Your email address will not be published. Required fields are marked *