ಶೇಂದಿ ತೆಗೆಯಲು ಹೋದ ವ್ಯಕ್ತಿ :ಸಂಶಯಾಸ್ಪದವಾಗಿ ಸಾವು

ಬಂಟ್ವಾಳ: ಶೇಂದಿ ತೆಗೆಯಲು ಹೋದ ವ್ಯಕ್ತಿಯೋರ್ವರು ಸಂಶಯಾಸ್ಪದವಾಗಿ ಮೃತಪಟ್ಟ ಘಟನೆ ಬಂಟ್ವಾಳ ಠಾಣಾ ವ್ಯಾಪ್ತಿಯ ಕಾರ್ಪೆ ಎಂಬಲ್ಲಿ ಸೋಮವಾರ ನಡೆದಿದೆ.ಮೃತಪಟ್ಟ ವ್ಯಕ್ತಿಯನ್ನು ಕಾರ್ಪೆ ನಿವಾಸಿ ನಾರಾಯಣ ಪೂಜಾರಿ (50) ಎಂದು ಗುರುತಿಸಲಾಗಿದೆ.ಶೇಂದಿ ತೆಗೆಯುವ ಕೆಲಸ ಮಾಡುತ್ತಿದ್ದ ಇವರು ಎಂದಿನಂತೆ ನಿನ್ನೆ ಸಂಜೆ ವೇಳೆ ಶೇಂದಿ ತೆಗೆಯಲು ಹೋಗಿದ್ದರು. ರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆ ಮನೆಯವರು ಹಾಗು ಸ್ಥಳೀಯರು ಹುಡುಕಾಟ ನಡೆಸಿದಾಗ ತಾಳೆ ಮರದ ಬುಡದಲ್ಲಿ ರಕ್ತ -ಸಿಕ್ತ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿತ್ತು.ನಾರಾಯಣ ಪೂಜಾರಿ ಅವರ ಸಾವಿನ ಬಗ್ಗೆ ಸ್ಥಳೀಯರಲ್ಲಿ ಸಾಕಷ್ಟು ಸಂಶಯಗಳು ಮೂಡುತ್ತಿದ್ದು, ಶೇಂದಿ ತೆಗೆಯಲು ಹೋದವರು ತಾಳೆ ಮರದಿಂದ ಬಿದ್ದು ಮೃತ ಪಟ್ಟಿದ್ದಾರೆಯೇ  ಅಥವಾ ಇವರನ್ನು ಕೊಲೆ ಮಾಡಿದ್ದಾರೆಯೇ ಎಂಬುದು ಪೊಲೀಸ್ ತನಿಖೆಯ ನಂತರ ತಿಳಿಯಬೇಕಿದೆ., ಘಟನಾ ಸ್ಥಳಕ್ಕೆ ಬಂಟ್ವಾಳ ಠಾಣಾ ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್, ಬಂಟ್ವಾಳ ಗ್ರಾಮಾಂತರ ಎಸ್. ಐ. ಪ್ರಸನ್ನ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *