ಫರಂಗಿಪೇಟೆಯ ಮಾರಣಾಂತಿಕ ಹಲ್ಲೆ ಪ್ರಕರಣ : 3 ಆರೋಪಿಗಳ ಬಂಧನ

ಫರಂಗಿಪೇಟೆ : ಪುದು ಕೇಂದ್ರದ ಬಿಜೆಪಿ ಸಾಮಾಜಿಕ ಜಾಲತಾಣದ ಪ್ರಮುಖರಾದ ಫರಂಗಿಪೇಟೆಯ ತೃಷಾಸ್ಟುಡಿಯೋ ಮಾಲೀಕ ದಿನೇಶ್ ಕೊಟ್ಟಿಂಜ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳಾದ ಅಮ್ಮೆಮ್ಮಾರು ನಿವಾಸಿ ಮಹಮ್ಮದ್ ಅರ್ಷದ್(19),ಅಬ್ದುಲ್ ರೆಹಮಾನ್(22) ಮತ್ತು ಮಹಮ್ಮದ್ ಸೈಪುದ್ದೀನ್(22) ರವರನ್ನು ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಪೊಲೀಸ್ ಉಪಾಧೀಕ್ಷಕರು ಬಂಟ್ವಾಳ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಪ್ರಸನ್ನ ಹಾಗೂ ಸಿಬ್ಬಂದಿರವರು ದಸ್ತಗಿರಿ ಮಾಡಿರುತ್ತಾರೆ.ಮತ್ತೊಬ್ಬ ಆರೋಪಿ ಸವಾದ್ ಪರಾರಿಯಾಗಿದ್ದು ದಸ್ತಗಿರಿಗೆ ವಿಶೇಷ ತಂಡ ರಚಿಸಲಾಗಿದೆ.