ಗುರುವಾರದಿಂದ ಲಾಕ್‌ಡೌನ್ : ಮೂರು ತಿಂಗಳ ಹಿಂದಿನ ಪೋಸ್ಟ್ ವೈರಲ್!

ಗುರುವಾರದಿಂದ ಒಂದು ವಾರ ಲಾಕ್ ಡೌನ್ ಎಂಬ ಜಯಕಿರಣದಲ್ಲಿ ಪ್ರಕಟವಾದ ಮೂರು ತಿಂಗಳ ಹಿಂದಿನ ಸುದ್ದಿಯನ್ನು ಯಾರೋ ಒಬ್ಬರು ಈಗ ಪೋಸ್ಟ್ ಮಾಡಿದ್ದು ಅದೀಗ ವೈರಲ್ ಆಗುತ್ತಿದೆ. ಈ ಬಗ್ಗೆ ಪತ್ರಿಕೆಗೆ ಫೋನ್ ಕರೆಗಳ ಮಹಾಪೂರವೇ ಹರಿದು ಬರುತ್ತಿದ್ದು ಹೆಚ್ಚಿನ ವಿವರವನ್ನು ಬಯಸುತ್ತಿದ್ದಾರೆ.


ಆದರೆ ಇದು ಮೂರು ತಿಂಗಳ ಹಿಂದೆ ದ.ಕ. ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಅಂದು ಪ್ರಕಟವಾದ ಸುದ್ದಿಯಾಗಿದೆ.


ನಮ್ಮ ಪತ್ರಿಕೆ, ವೆಬ್‌ಸೈಟ್ ಓದುಗರು ಮತ್ತು ಅಭಿಮಾನಿಗಳು ಈ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಲಾಕ್‌ಡೌನ್ ನಡೆಯುವ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ.


ಪತ್ರಿಕೆಯ ಮೇಲೆ ವಿಶ್ವಾಸ ಇರಿಸಿದ ಎಲ್ಲರಿಗೂ ಧನ್ಯವಾದಗಳು

Leave a Reply

Your email address will not be published. Required fields are marked *