ಐತಿಹಾಸಿಕ ಬಳಪ ಕಾವಲಿ ಕೆತ್ತನೆಗಾರ, ಯುವ ಕಲಾವಿದ ರಾಘವೇಂದ್ರ ಆಚಾರ್ಯ ಗೋಳಿಕಟ್ಟೆ ಧಾರುಣ ಸಾವು

ಬೆಳ್ತಂಗಡಿ: ತಲೆಯ ಮೇಲೆ ಕಲ್ಲು ಕುಸಿದು ಬಿದ್ದು ಐತಿಹಾಸಿಕ ಬಳಪ ಕಾವಲಿ ಕೆತ್ತನೆಗಾರ, ಯುವ ಕಲಾವಿದ ಹಾಗೂ ಚಲನಚಿತ್ರ ನಟರಾಗಿದ್ದ ರಾಘವೇಂದ್ರ ಆಚಾರ್ಯ ಗೋಳಿಕಟ್ಟೆ ಅವರು ಅ.4 ರಂದು ಧಾರುಣವಾಗಿ ಮೃತಪಟ್ಟಿದ್ದಾರೆ.
ದಿವಂಗತ ಸೀನ ಆಚಾರ್ಯರವರ ಪುತ್ರರಾಗಿರುವ ರಾಘವೇಂದ್ರ ಆಚಾರ್ಯ ಅವರು ದೈನಂದಿನ ವೃತ್ತಿ ಯಲ್ಲಿ ತೊಡಗಿಸಿಕೊಂಡಿದ್ದ ವೇಳೆ ಏಕಾಏಕಿ ಮೇಲಿನಿಂದ ಕಲ್ಲೊಂದು ಜಾರಿ ಇವರ ತಲೆ ಮೇಲೆ ಬಿದ್ದ ಪರಿಣಾಮ  ತೀವ್ರ ಗಾಯವಾಗಿ ಅವರು ಅಕಾಲಿಕವಾಗಿ ಸಾವನ್ನಪ್ಪಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ ದೀಪೋತ್ಸವ, ಯಜಿರೆಯಲ್ಲಿ ನಡೆದಿದ್ದ ವಿಶ್ವ ತುಳು ಸಮ್ಮೇಳನ, ಐತಿಹಾಸಿಕ‌ಕನ್ನಡದ ನುಡಿಜಾತ್ರೆಯಾದ ಆಳ್ವಾಸ್ ನುಡಿಸಿರಿ, ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸರಕಾರ ಸಂಯೋಜಿಸುವ ಕೃಷಿ ಮೇಳಗಳಲ್ಲಿ ಅವರು ಅನೇಕ ವರ್ಷಗಳಿಂದ ಬಳಪ ಕಲ್ಲು ಕೆತ್ತನೆ ಪ್ರದರ್ಶನವನ್ನು ಮಾಡಿ  ಯಶಸ್ವಿಯಾಗಿದ್ದರು.


ತುಳು ಚಲನ ಚಿತ್ರವಾದ ‘ಬಳಿಪ’ ಚಿತ್ರದಲ್ಲಿ ಅಪೂರ್ವ ನಟನೆ,ತುಳು ನಾಟಕ ರಂಗಭೂಮಿಯಲ್ಲಿ ಅತ್ಯುತ್ತಮ ಹಾಸ್ಯ ಕಲಾವಿದರಾಗಿ, ಊರಿನಲ್ಲಿ ಎಲ್ಲರ ಜಾತಿ ಧರ್ಮದವರ ಜೊತೆ ಆತ್ಮೀಯವಾಗಿ ಬೆರೆಯುತ್ತಾ ಎಲ್ಲರ ಮೆಚ್ಚುಗೆ ಗಳಿಸಿಕೊಂಡಿದ್ದರು.
ಮೃತರು ತಾಯಿ ಸುಮಿತ್ರಾ, ಪತ್ನಿ ಪ್ರಭಾ, ಇಬ್ಬರು ಪುತ್ರಿಯರಾದ ರಶ್ಮಿತಾ‌ ಮತ್ತು ಪ್ರವಿತಾ ಹಾಗೂ ಬಂಧುವರ್ಗಗಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *