40 ಲಕ್ಷ ರೂ. ಮೌಲ್ಯದ ವಜ್ರ ಮಾರಾಟ ಯತ್ನ: ಮೂವರ ಸೆರೆ

ಮಂಗಳೂರು: 40 ಲಕ್ಷ ರೂಪಾಯಿ ಬೆಲೆಬಾಳುವ ವಜ್ರದ ಹರಳುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಲ್ಲಿ ಪುತ್ತೂರಿನ ಮೂವರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಲ್ನಾಡು ಗ್ರಾಮದ ರವಿಕುಮಾರ್, ಬೆಳಂದೂರು ಗ್ರಾಮದ ಸುಧೀರ್ ಮತ್ತು ಬೆಳ್ತಂಗಡಿಯ ಪ್ರವೀಣ್ ಕುಮಾರ್ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಒಂಬತ್ತು ವಜ್ರದ ಹರಳುಗಳು, ರತ್ನಗಳು ಹಾಗೂ ಕಾರ್ ವಶಕ್ಕೆ ಪಡೆದುಕೊಳ್ಳಲಾಗಿದೆ. ವಶಕ್ಕೆ ಪಡೆದ ವಜ್ರಗಳ ಮೌಲ್ಯ 40 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ತನಿಖೆ ಮುಂದುವರಿದಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.

Leave a Reply

Your email address will not be published. Required fields are marked *