ಹತ್ಯೆ ಆರೋಪಿಯನ್ನು ಪೊಲೀಸರ ಸಮ್ಮುಖದಲ್ಲೇ ಥಳಿಸಿ ಕೊಂದ ಗ್ರಾಮಸ್ಥರು!

ಲಖ್ನೋ: ಶಾಲಾ ಶಿಕ್ಷಕನನ್ನು ಗುಂಡಿಟ್ಟು ಹತ್ಯೆಗೈದಿರುವ ಆರೋಪಿಯನ್ನು ಗ್ರಾಮಸ್ಥರೇ ಪೊಲೀಸರ ಸಮ್ಮುಖದಲ್ಲೇ ಹೊಡೆದು ಕೊಂದಿರುವ ಘಟನೆ ಪೂರ್ವ ಉತ್ತರಪ್ರದೇಶದ ಕುಶಿ ನಗರದಲ್ಲಿ ಇಂದು ನಡೆದಿದೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಜನರ ಗುಂಪು ಪೊಲೀಸರ ಸಮ್ಮುಖದಲ್ಲಿ ಕೋಲುಗಳಿಂದ ವ್ಯಕ್ತಿಯನ್ನು ಥಳಿಸುವ ದೃಶ್ಯ ಅದರಲ್ಲಿದೆ. ಕೊಲೆಗೀಡಾದಾತ ಗೋರಖ್‍ಪುರದವನಾಗಿದ್ದು ಈತ ಇಂದು ಬೆಳಗ್ಗೆ ಬಂದೂಕಿನಿಂದ ಶಿಕ್ಷಕರೊಬ್ಬರನ್ನು ಗುಂಡಿಟ್ಟು ಸಾಯಿಸಿದ್ದ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *