ಸುರತ್ಕಲ್-ಹೊಸಬೆಟ್ಟು ಹೆದ್ದಾರಿಯಲ್ಲಿ ಕಾಲು ಮುರಿದ ಕೋಣಗಳು! ಪೊಲೀಸರಿಂದ ತನಿಖೆ!!

ಸುರತ್ಕಲ್: ಇಲ್ಲಿಗೆ ಸಮೀಪದ ಹೊಸಬೆಟ್ಟು ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿ ಎರಡು ಕೋಣವನ್ನು ಟರ್ಪಾಲು ಹಾಕಿ ಮುಚ್ಚಿಟ್ಟಿದ್ದಾರೆ. ಕೋಣದ ಕಾಲುಗಳು ಮುರಿದಿದ್ದು ಜಾನುವಾರು ಸಾಗಾಟಗಾರರು ಸಾಗಾಟ ಮಾಡುವಾಗ ವಾಹನದಿಂದ ಕೆಳಕ್ಕೆ ಬಿದ್ದು ಗಾಯಗೊಂಡಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳೀಯರು ಸುರತ್ಕಲ್ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು ಅವರು ತನಿಖೆ ನಡೆಸುತ್ತಿದ್ದಾರೆ. ರಸ್ತೆಗೆ ಎಸೆಯಲ್ಪಟ್ಟ ಕೋಣಗಳನ್ನು ಮತ್ತೆ ಲೋಡ್ ಮಾಡಲು ಸಾಧ್ಯವಾಗದೆ ತೊರೆದು ಜಾನುವಾರು ಕಳ್ಳರು ಪರಾರಿಯಾಗಿಬೇಕೆಂದು ಸ್ಥಳೀಯರು ಶಂಕಿಸಿದ್ದಾರೆ.

Leave a Reply

Your email address will not be published. Required fields are marked *