ಸಾಲ ಮರುಪಾವತಿ ಅವಧಿ ಇನ್ನೂ 2 ವರ್ಷ ವಿಸ್ತರಿಸಬಹುದು: ಕೇಂದ್ರ

ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ ಸುತ್ತೋಲೆಯ ಪ್ರಕಾರ ಸಾಲ ಮರುಪಾವತಿ ಅವಧಿಯನ್ನು ಇನ್ನೂ ಎರಡು ವರ್ಷಗಳ ಕಾಲ ವಿಸ್ತರಿಸಬಹುದು ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ಗೆ ಇಂದು ಹೇಳಿದೆ.
ಕಂತುಗಳ ಮುಂದೂಡಿಕೆ ಅವಧಿಯಲ್ಲಿನ ಬಡ್ಡಿಯ ಮೇಲೆ ಬಡ್ಡಿ ಮನ್ನಾ ಮಾಡುವ ಪ್ರಶ್ನೆಯ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸರಕಾರ, ಬಡ್ಡಿ ಮೇಲಿನ ಬಡ್ಡಿ ಮನ್ನಾ ಮಾಡುವ ಬಗ್ಗೆ ಪರಿಹಾರವನ್ನು ಕಂಡುಕೊಳ್ಳಲು ಕೇಂದ್ರ, ಆರ್ಬಿಐ ಹಾಗೂ ಬ್ಯಾಂಕರ್ಗಳ ಸಂಘ ಒಟ್ಟಾಗಿ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದೆ.