ಮೂಡಬಿದ್ರೆ: ಯುವಕನ ಬರ್ಬರ ಹತ್ಯೆ!

ಮೂಡಬಿದ್ರೆ: ಇಲ್ಲಿಗೆ ಸಮೀಪದ ಬಡಗ ಮಿಜಾರು ಎಂಬಲ್ಲಿ ಯುವಕ ನೋರ್ವನನ್ನು ಮಾರಕಾಸ್ತ್ರಗಳಿಂದ ಕಡಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಳಕಿಗೆ ಬಂದಿದೆ. ಬಡಗಮಿಜಾರು ಗ್ರಾಮದ ಅರೆಮಜಲು ಪಲ್ಕೆ ನಿವಾಸಿ ಚಂದಯ್ಯ ಗೌಡರ ಪುತ್ರ ಉಮೇಶ್ ಗೌಡ(35) ಹತ್ಯೆಗೊಳಗಾದವರು.
ನಿನ್ನೆ ತಡರಾತ್ರಿ ಯಾರೋ ದುಷ್ಕರ್ಮಿ ಗಳು ಮಾರಕಾಯುಧಗಳಿಂದ ಕಡಿದು ಕೊಲೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಮೂಡಬಿದ್ರೆ ಪೊಲೀಸರು ಬೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
