ಮೂಡಬಿದ್ರೆ ಮೆಸ್ಕಾಂ ಕಚೇರಿಗೆ ವಾಸ್ತು ದೋಷ !
ಹೆಬ್ಬಾಗಿಲು ಮುಚ್ಚಿ ಹಿತ್ತಲ ಬಾಗಿಲ ಬಳಕೆ!!

ಮೂಡಬಿದ್ರೆ: ಇಲ್ಲಿನ ಮೆಸ್ಕಾಂ ಕಚೇರಿಯಲ್ಲಿ ವಾಸ್ತು ದೋಷ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಎದುರಿನ ಬಾಗಿಲನ್ನು ಶಾಶ್ವತವಾಗಿ ಮುಚ್ಚಲಾಗಿದ್ದು, ಹಿಂಬಾಗಿಲ ಬಳಕೆ ನಡೆಯುತ್ತಿದೆ.
ಇತ್ತೀಚೆಗೆ ಅಧಿಕಾರಿಯೊಬ್ಬರು ಅಧಿಕಾರ ಸ್ವೀಕರಿಸಿದ್ದು, ಅವರ ನಂಬಿಕೆಯಂತೆ `ವಾಸ್ತು’ ಬದಲಾವಣೆ ನಡೆದಿದೆ ಎಂದು ಹೇಳಲಾಗಿದೆ. ವಿಧಾನ ಸೌಧ, ಪಾರ್ಲಿಮೆಂಟ್ ಗಳಲ್ಲಿ ನಡೆಯುತ್ತಿದ್ದ ವಾಸ್ತು ಬದಲಾವಣೆ ಕರೆಂಟ್ ನೀಡುವ ಮೆಸ್ಕಾಂ ಕಚೇರಿಯಲ್ಲಿ ನಡೆದಿರುವುದು ಸಾರ್ವಜನಿಕರಿಗೆ ಶಾಕ್ ನೀಡಿದೆ.

Leave a Reply

Your email address will not be published. Required fields are marked *