ಬೈಕ್ ಸವಾರನ ಮೇಲೆ ಬಿದ್ದ ತಂತಿಕಂಬ!

ಹೆಬ್ರಿ: ತಂತಿಕಂಬ ಚಲಿಸುತ್ತಿದ್ದ ಬೈಕ್ ಮೇಲೆ ಏಕಾಏಕಿ ಬಿದ್ದ ಪರಿಣಾಮ ಸಹಸವಾರ ಗಂಭೀರ ಗಾಯಗೊಂಡ ಘಟನೆ ಮಣಿಪಾಲ ಸಮೀಪದ ಪರ್ಕಳ ಶ್ರೀಕೃಷ್ಣ ಕಲ್ಯಾಣ ಮಂಟಪದ ಎದುರು ನಡೆದಿದೆ. ಹಿರಿಯಡ್ಕ ಅಂಜಾರು ನಿವಾಸಿ ಸದಾಶಿವ ಶೇರಿಗಾರ್(58) ಗಂಭೀರ ಗಾಯಗೊಂಡಿದ್ದು ಇವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹರೀಶ್ ಎಂಬವರು ಬೈಕ್ ಚಲಾಯಿಸುತ್ತಿದ್ದು ಅವರು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಹೆದ್ದಾರಿ ಪಕ್ಕದ ಮನೆಯ ಕಂಪೌಂಡ್ ಒಳಗಿದ್ದ ತೆಂಗಿನ ಮರ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಕಂಬ ರಸ್ತೆಗುರುಳಿದೆ. ಮಣಿಪಾಲ ಪೊಲೀಸರು ಹಾಗೂ ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.