ಬಜಪೆ: ಡೆತ್ ನೋಟ್ ಬರೆದಿಟ್ಟು ವಿವಾಹಿತೆ ಆತ್ಮಹತ್ಯೆ

ಬಜಪೆ: ವಿವಾಹಿತೆಯೋರ್ವಳು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಘಟನೆ ಶುಕ್ರವಾರ ಬಜಪೆಯಲ್ಲಿ ನಡೆದಿದೆ. ಇಲ್ಲಿನ ಜ್ಯುವೆಲ್ಲರಿ ಶಾಪ್ ಒಂದರ ಮಾಲಕ ಅಶೋಕ್ ಆಚಾರ್ಯ ಎಂಬವರ ಪುತ್ರಿ ಶಿಲ್ಪಾ(28)ಶುಕ್ರವಾರ ಬೆಳಿಗ್ಗೆ ಸುಮಾರು ಹನ್ನೊಂದು ಗಂಟೆ ಸುಮಾರಿಗೆ ಮನೆಯ ಕೋಣೆಯಲ್ಲಿ ಫ್ಯಾನಿಗೆ ಚೂಡಿದಾರ್ ಶಾಲಿನಿಂದ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹತ್ತು ತಿಂಗಳ ಮಗು ಹೊಂದಿರುವ ಇವರು ಕೆಲ ಸಮಯದ ಹಿಂದೆ ತಾಯಿ ಮನೆಗೆ ಬಂದಿದ್ದರು. ಬಜಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದು ತುಂಬಾನೇ ದುಖಃ ದ ಸಂಗತಿ.ಆ ಮಗುವಿನ ಮುಖ ನೋಡಿಯಾದರೂ ಬದುಕಬೇಕಿತ್ತು.ಇದು ದುರಂತವೇ ಸರಿ