ಬಂಟ್ವಾಳ: ಹಿಟ್ ಆಂಡ್ ರನ್ ಗೆ ಯುವಕ ಬಲಿ! ನಿಲ್ಲಿಸದೆ ಪರಾರಿಯಾಗಿದ್ದ ಕಾರ್ ಸಮೇತ ಚಾಲಕ ಪೊಲೀಸ್ ವಶ!!

ಮಂಗಳೂರು: ನಿನ್ನೆ ಸಂಜೆ ನಡೆದ ಹಿಟ್ ಎಂಡ್ ರನ್ ಪ್ರಕರಣ ದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸ್ಕೂಟರ್ ಸವಾರ ಖಾಸಗಿ ಆಸ್ಪತ್ರೆಯಲ್ಲಿ ರಾತ್ರಿ ವೇಳೆ ಮೃತಪಟ್ಟಿದ್ದಾರೆ. ಮೃತರನ್ನು ಬಂಟ್ವಾಳ ಪಲ್ಲಮಜಲು ನಿವಾಸಿ ಪ್ರಕಾಶ್ ಆರ್. ಚೌಟ ಎಂದು ಹೆಸರಿಸಲಾಗಿದೆ. ನಿನ್ನೆ ಸಂಜೆ ವೇಳೆ ಬಿಸಿರೋಡು ಸರ್ಕಲ್ ಬಳಿ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಡೆದಿತ್ತು.

ಪಾಣೆಮಂಗಳೂರು ಕಡೆಯಿಂದ ಬಿಸಿರೋಡು ಕಡೆಗೆ ಅವರು ಸ್ಕೂಟರ್ ನಲ್ಲಿ ಬರುತ್ತಿರುವ ವೇಳೆ ಹಿಂಬದಿಯಿಂದ ಬಂದ ಅಪರಿಚಿತ ಕಾರ್ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಡಿಕ್ಕಿಹೊಡೆದು ಪರಾರಿಯಾಗಿದ್ದ ವಾಹನವನ್ನು ಮೆಲ್ಕಾರ್ ಟ್ರಾಫಿಕ್ ಠಾಣಾ ಎಸ್. ಐ.ರಾಜೇಶ್ ಕೆ.ವಿ. ನೇತೃತ್ವದ ತಂಡ ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿ ವಾಹನ ಚಾಲಕನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *